ಮೂಡ್ನಾಕೂಡು ಚಿನ್ನಸ್ವಾಮಿ ನಾನು ದೇವಸ್ಥಾನಕ್ಕೆ ಹೋದಾಗ ಚಪ್ಪಲಿಯನ್ನು ಹೊರಗೆ ಬಿಡುವುದಿಲ್ಲ ನಾನೇ ಹೊರಗಿರುತ್ತೇನೆ ಚಮ್ಮಾರನ ಕಾಲುಗಳಲ್ಲಿ ಕಂಡ ಚಪ್ಪಲಿ ಮನುಷ್ಯ ನಾಯಿಯನ್ನು ಕಚ್ಚಿದಾಗ ಆಗುವಂತೆ ಸುದ್ದಿಯಾಗುತ್ತದೆ ಚಪ್ಪಲಿಗಳನ್ನು ಬಿಚ್ಚಿ ಹರಡುವ ಎಲ್ಲರ ಕಾಲುಗಳು ನನ್ನ ಮೇಲೆ...
ಹಿಂದಿ ಮೂಲ: ಶಕ್ತಿ ಪ್ರಕಾಶ್, ಕನ್ನಡಕ್ಕೆ: ಹಜ಼ರತ್ ಅಲಿ ಉಜ್ಜಿನಿ ಹಾಗೆಯೇ ಸುಮ್ಮನೆ ಹೇಳುತ್ತಿಲ್ಲ ನಿನಗೆ ಕ್ಷಮೆ ಕೇಳು ಎಂದು, ಅಯ್ಯಾ ನಿನಗೆಯೇ ಹೇಳುತ್ತಿರುವುದು ಕ್ಷಮೆ ಕೇಳಿಬಿಡು ನಮ್ಮೆದುರಿಗಿಲ್ಲವೇ ಆ ಘನ ಹೊತ್ತಿಗೆ, ನಮಗೂ ಅನಿಸುತ್ತಿದೆ...
ಬಂಜಗೆರೆ ಜಯಪ್ರಕಾಶ ಕೈಗೆ ಬಳೆ ಕಾಲಿಗೆ ಚೈನು ಎದೆಗೆ ಕಟ್ಟು ದ್ರಾಕ್ಷಿ ಕಣ್ಣಿನ ಹುಡುಗಿ ನನ್ನ ಕನಸುಗಳಲ್ಲಿ ಬಿಕ್ಕುತ್ತಾಳೆ ನೋವು ಸರಳುಗಳಿಂದ ನೇಯ್ದ ನಗುವ ಪಂಜರದಲ್ಲಿ ಹುಡುಗಿ ಬಾಗಿಲಿಗಾಗಿ ತುಳಿದಾಡುತ್ತಾಳೆ ಪೆಠಾರಿ ಪಾತ್ರೆಗಳಿಗೆ ಎಡವಿಕೊಂಡು ಹುಡುಗಿ...
ಡಾ.ಎನ್.ಕೆ.ಪದ್ಮನಾಭ ಕವಿತೆ ಎಂದರೆ ಹಾಗೆಯೇ. ಅದು ಮನಸ್ಸಿಗೆ ಹತ್ತಿರ. ಬುದ್ಧಿ-ಭಾವಗಳ ಎಚ್ಚರದೊಳಗೆ ಸೃಷ್ಟಿಯಾಗುವ ಕೌತುಕ. ಒಂದಷ್ಟು ಖುಷಿ, ಒಂದಷ್ಟು ವಿಷಾದದ ಛಾಯೆಯನ್ನು ಅಕ್ಷರಗಳಲ್ಲಿ ಹಿಡಿದಿಟ್ಟು ಬೆಳಕಿನ ಗಮ್ಯವನ್ನು ಹೊಳೆಸುವ ದಿವ್ಯತ್ವ ಅದಕ್ಕಿರುತ್ತದೆ. ಕಾಲದಿಂದ ಮತ್ತೊಂದು ಕಾಲಕ್ಕೆ...
ತೆಲುಗು : ವರವರರಾವ್,ಕನ್ನಡಕ್ಕೆ : ಎಸ್ ಡಿ ಕುಮಾರ್ ಮನದಾಳದ ಪದರಗಳಲ್ಲಿ ತುಳಿದಿಡಲಾದ ಮಾತುಗಳ ತಟ್ಟಿ ಎಬ್ಬಿಸಿ..ನಡೆಸಿ ನೋಡಬೇಕು ರಚ್ಚು ಹಿಡಿದ ಕಾಲುಗಳೆಬ್ಬಿಸಿ ರೆಕ್ಕೆಗಳು ಆಗಸದತ್ತ ಹಾರುವುದೇನೋ ನೋಡಬೇಕು ಒಣಗಿದ ಕಿವಿಗಳಿಗೆ ಯಾರದ್ದೋ ಮಾತಲ್ಲ ನನ್ನ...
ಡಾ.ಕಾವ್ಯಶ್ರೀ, ಸಹಾಯಕ ಪ್ರಾಧ್ಯಾಪಕಿ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ನಿಂಬಿಯಾ ಬನದಾಗ ರಂಭಿ ನಿಂತಕ್ಕಿ ಯಾರೆ ಮುತ್ತು ಉದುರ್ಯಾವ ನೆಲಕೆಲ್ಲ ಎಲೆ ಗೆಳೆತಿ ಹಾಡು ಹುಟ್ಯಾವ ಮನದಾಗ ಅತ್ತಿಯಾ ಮನೆಯಾಗ ತೊತ್ತಾಗಿ ದುಡಿಬ್ಯಾಡ...
ಟಿ.ಎಸ್. ರಾಜೇಂದ್ರ ಪ್ರಸಾದ್ ತೇಕಲವಟ್ಟಿ, ದಾವಣಗೆರೆ ಕಣ್ಣೊಳಗೆ ಕಣ್ಣು ನೆಟ್ಟು ಪುಣ್ಯಕೋಟಿಯಂತೆ ಸೆರಗಲ್ಲಿ ನೋವಿನ ಮುಡಿತುಂಬ ಬಿಚ್ಚಿಟ್ಟು ಎದೆಯೊಳಗಿನ ಬೆಂಕಿಯಂತಹ ದಿಟವನು ನಡೆದು ಹೋದಳು ಅಕ್ಕನಂತೆ! ಗುಟ್ಟುರಟ್ಟಾಗದಿರಲು ಕೈಯಲ್ಲಿ ಕೈ ಬೆಸೆದು ಮುಚ್ಚಿಟ್ಟು ಬೆರಳುಗಳಲ್ಲಿ ಬಾಷೆಯನು...
ಪರಶುರಾಮ್. ಎ ‘ದೀವಟಿಗೆ‘ ಎಂಬ ಕವನ ಸಂಕಲನವನ್ನು ಮೈ,ನಾ ಎಂಬ ಕಾವ್ಯ ನಾಮದಿಂದ ಮೈಸೂರಿನ ನಾರಾಯಣರವರು ಬರೆದಿರುವ ಪುಸ್ತಕ. ತಮ್ಮ ಮೊದಲ ಕವನ ಸಂಕಲನದಲ್ಲಿ ಪ್ರಬುದ್ಧ ವಿಷಯಗಳನ್ನು ತಮ್ಮದೇ ಸ್ವಂತ ಶೈಲಿಯಲ್ಲಿ ಕವನಗಳನ್ನು ಈ ಪುಸ್ತಕದ...
ಜಿ. ಮುದ್ದುವೀರಸ್ವಾಮಿ ಹಿರೇಮಳಲಿ, ದಾವಣಗೆರೆ ಅವನು ಹುಚ್ಚ ಮಹಾನಗರದ ಬೀದಿಗಳಲ್ಲಿ ಅಲೆಯುತ್ತಾನೆ ಏನನ್ನೊ ಹುಡುಕುತ್ತ ಅಲೆದಾಟ ನಿಂತ ನೀರಲ್ಲ ಎಲ್ಲಿಂದಲೊ ಆರಂಭ ಗಮ್ಯವಿರದ ನಿಲುಗಡೆ ಸಾಗುವ ದಾರಿಯ ಇಕ್ಕೆಲಗಳ ಕಸ ಕಡ್ಡಿ ಖಾಲಿ ನೀರಿನ ಬಾಟಲಿ...
ಮೂಲ : ಬೆರ್ಟೋಲ್ಟ್ ಬ್ರೆಕ್ಟ್ |ಅನುವಾದ: ಶಾ. ಬಾಲುರಾವ್ ಕೋಟಿನ ಗುಂಡಿತೂತಲ್ಲೊಂದು ಹೂ ಸಿಕ್ಕಿಸಿ ಕುರ್ಫುಸ್ಟೆರ್ನ್ ಡಾಮ್ ಮಹಾಮಾರ್ಗದಲ್ಲಿ ಹೊರಟ ಈ ಯುವಕನಿಗೆ ಜಗತ್ತು ಶೂನ್ಯವೆನಿಸುತ್ತದೆ. ಕಕ್ಕಸ್ಸಿನಲ್ಲಿ ಕೂತಾಗ ಅದು ಸ್ಪಷ್ಟವಾಗುತ್ತದೆ: ಅವನು ಶೂನ್ಯದಲ್ಲಿ ಹೇಲುತ್ತಿದ್ದಾನೆ....