ಸುದ್ದಿದಿನ, ಚಿತ್ರದುರ್ಗ : ನವಿಲೇಹಾಳ್ ನ ಯುವ ಕವಿ ವಿಜಯ್ ನವಿಲೇಹಾಳ್ ಅವರಿಗೆ ಸೂಲೇನಹಳ್ಳಿಯ ತನುಶ್ರೀ ಪ್ರಕಾಶನ ಸಂಸ್ಥೆಯು ಉದಯೋನ್ಮುಖ ಕಾವ್ಯ ಚೇತನಾ ಪ್ರಶಸ್ತಿಯನ್ನು ಭಾನುವಾರ ನಗರದ ರೋಟರಿ ಬಾಲಭವನದಲ್ಲಿ ಪ್ರದಾನಮಾಡಲಾಯಿತು. ಸೂಲೇನಹಳ್ಳಿಯ ತನುಶ್ರೀ ಪ್ರಕಾಶನ...
ನಂದಕಲಾ ನಿಸರ್ಗದ ಮಡಿಲಲ್ಲಿ ಉದಯಿಸಿದೆ ಫಲನೀಡುವ ಮರವಾಗಿ ಜನಿಸಿದೆ ನರಮಾನವರ ಕಣ್ಣು ನನ್ನ ಮೇಲೆ ಬಿದ್ದಿದೆ ಅವನ ಕೊಡಲಿ ಏಟು ನನ್ನ ಎದೆಯ ಸೀಳಿದೆ. ಕಾನನದ ವಾಸಿಯಾಗಿ ಉದಯಿಸಿದೆ ಕಾಡು ಪ್ರಾಣಿಯ ಸಂಕುಲದಲ್ಲಿ ಜನಿಸಿದೆ...
ಧರಣೀಪ್ರಿಯೆ, ದಾವಣಗೆರೆ (ಭಾಮಿನಿ ಷಟ್ಪದಿಯಲ್ಲಿ) ವಾಸಿಯಾಗದ ರೋಗ ಬಂದಿತು ಘಾಸಿಗೊಳಿಸಿತು ವಿಶ್ವದೆಲ್ಲೆಡೆ ಸೋಸಿಗಾಳಿಯಸೇವಿಸಿರೆನುತ ಬಟ್ಟೆ ಕಟ್ಟುತಲಿ| ರೋಸಿಹೋಗುತ ಜನರ ಜೀವನ ಮಾಸಿಹೋದವು ಕನಸು ಬದುಕಲಿ ಹಾಸಿಹೊದ್ದವು ಕೊರಗಿ ಮನದಲಿ ಹೊರಗೆ ಬರದಂತೆ|| ಮಾತೆ ಮುನಿದಳು ಧರಣಿ...
ಮನಸ್ವಿ ಎಂ ಸ್ವಾಮಿ, ದಾವಣಗೆರೆ ಸಾಗುತಿದೆ ಹಿಂಡು ಅನವರತ ಒಂದಲ್ಲ ಎರಡಲ್ಲ ಅಗಣಿತ ಗಣ; ಜಿಂಕೆಗಳೆಷ್ಟೊ ಕೋಣಗಳೆಷ್ಟೋ ಹಸಿದ ಸಿಂಹ – ಹುಲಿಗಳೆಷ್ಟೊ ಎಲ್ಲ ಸಹಿಸುವ ಆನೆಗಳೆಷ್ಟೊ ದಾಟಲಾಗದ ನದಿಯ ದಾಟುವ ಛಲವ ಕದಡುವ ಮೊಸಳೆಗಳೆಷ್ಟೊ...
ಕೆ.ಎಸ್. ನಿಸಾರ್ ಅಹಮದ್ ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ ಲೋಕವೆ, ಹೀರದಿರು ದುಂಬಿಯೊಲು ಹೂವ; ಬಾಳಿನ ಕಷ್ಟಗಳ ಬಲು ಘೋರ ಪಯಣದಲಿ ಚಣದೊಂದೆ ಕನಸಿದುವೆ, ಬೆರಸದಿರು ನೋವ. ನನ್ನ ನಲವಿನ ಬಳ್ಳಿ .. ಸವಿ...
ಸವಿತ ನಾಗಭೂಷಣ, ಶಿವಮೊಗ್ಗ ಅದೇ ಆ ಶಿವನ ವೇಷಧಾರಿ ನಾನಿದ್ದ ಬಸ್ಸಿನಲ್ಲಿಯೇ ಇದ್ದ ನನ್ನೊಂದಿಗೆ ಬಸ್ಸಿನಿಂದಿಳಿದ ತೇಗದ ಮರದ ಹಾಗೆ ಉದ್ದಕೆ ಸಪೂರ ಮೋಡದ ಮೈ ಬಣ್ಣ ಮಿಂಚಿನ ನಗು ಮುಡಿಗೆ ತಗಡಿನ ಚಂದ್ರನ ಮುಡಿದಿದ್ದ...
ಮೂಲ – ಗನ್ವರ್(ನಾರ್ವೆಯನ್ ಕವಿ), ಕನ್ನಡಕ್ಕೆ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಬೆಳಕು ನುಗ್ಗುತ್ತದೆ ತೆರೆದ ರೂಮಿನೊಳಕ್ಕೆ ಮೌನದ ಅಲೆಗಳಂತೆ. ಕೆಂಪು ಕ್ಯಾಕ್ಟಸ್ ಹೂವು ಎಲ್ಲಕಡೆ ಚೆಲ್ಲಿವೆ, ನಾಚುತ್ತ ನೋಡಿವೆ ನುಗ್ಗುತ್ತಿರುವ ಬೆಳಕಿನತ್ತ...
ಎಚ್.ಎಸ್. ಬಿಳಿಗಿರಿ ನಿನ್ನ ಕಣ್ಣಲಿ ಮಿಂಚು, ನನ್ನ ಎದೆಯಲಿ ಸಿಡಿಲು! ನಿನ್ನ ತುಟಿಯೊಳು ರೋಜ, ನನ್ನ ಎದೆಯಲಿ ಮುಳ್ಳು! ನಿನ್ನೆದೆಯೊಳಮೃತಪೂರಿತ ಕುಂಭ-ಅದ ಕಳ್ಳು ನನಗೆ; ಕಣ್ಣಿಗೆ ತಂಪು, ಎದೆಗೂ ಉರಿ ಭುಗಿಭುಗಿಲು! ನಿನಗಿದೆಯೆ ತುಂಬಿದೆದೆ, ನನ್ನ...
ವಾಯ್.ಜೆ.ಮಹಿಬೂಬ ಅವಳು ಬರೀ ಅವಳಲ್ಲ..! ದಿನ ಬೆಳಗುವ ಬೆಳಕು-! ಅವ ಬಯಸುವ ಬದುಕು ಅವನಿಯೊಳಗಣ ಜನನಿ ಭಾವದೊಳಗಿನ ಬಾಗಿನ ಭಾನಿನಗಲದ ಭಕ್ತಿ..! ಅವನ ಬಯಕೆಯ ಶಕ್ತಿ ..! ಅವಳು ಬರೀ ಅವಳಲ್ಲ..! ಬಾಳಿಗಂಟಿದ ಸಮತೆ ಹಿತವನುಣಿಸುವ...
ಜಿ.ಎಸ್. ಶಿವರುದ್ರಪ್ಪ ಪ್ರೀತಿ ಇಲ್ಲದ ಮೇಲೆ – ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ? ಪ್ರೀತಿ ಇಲ್ಲದ ಮೇಲೆ – ಮಾತಿಗೆ ಮಾತು ಕೂಡೀತು ಹೇಗೆ?...