ದಿನದ ಸುದ್ದಿ
ಜೂ.2 ರಿಂದ ವಿಕಲಚೇತನರಿಗೆ ಲಸಿಕೆ ಆಂದೋಲನ
ಸುದ್ದಿದಿನ,ದಾವಣಗೆರೆ : ದಾವಣಗೆರೆ ಜಿಲ್ಲೆಯ ಎಲ್ಲಾ ವಿಧದ ವಿಕಲಚೇತನರಿಗೆ ಜೂ.02 ಮತ್ತು 03 ರಂದು ಎರಡು ದಿನಗಳ ಕಾಲ ಜಿಲ್ಲೆಯಲ್ಲಿನ ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ನಿರೋಧಕ ಲಸಿಕೆಯನ್ನು ವಿಕಲಚೇತನರಿಗೊಸ್ಕರ ಮೀಸಲಿಟ್ಟು ಹಾಕಲಾಗುವುದು.
ಎಲ್ಲಾ ವಿಕಲಚೇತನರು ಎಂ.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ ಮತ್ತು ಯು.ಆರ್.ಡಬ್ಲ್ಯೂಗಳ ಸಹಕಾರದೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಪಡೆಯಲು ವಿಕಲಚೇತನರ ಆಧಾರ್ ಕಾರ್ಡ್ ಮತ್ತು ಅಂಗವಿಕಲರ ಗುರುತಿನ ಚೀಟಿ ಅಥವಾ ವಿಕಲಚೇತನರ ಸರ್ಟಿಫಿಕೇಟ್/ ಯು.ಡಿ.ಐ.ಡಿ, ಕಾರ್ಡ್ ದಾಖಲೆಗಳೊಂದಿಗೆ ಹಾಜರಾಗಬೇಕು.
ಇದನ್ನೂ ಓದಿ | ಗೃಹರಕ್ಷಕದಳ ಗೌರವ ಸಮಾದೇಷ್ಟರ ಹುದ್ದೆಗೆ ಅರ್ಜಿ ಆಹ್ವಾನ
ಜಿಲ್ಲೆಯ ವಿಕಲಚೇತನರಿಗಾಗಿಯೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ನಿಂದ ಈ ವಿಶೇಷ ಕಾರ್ಯಕ್ರಮ ರೂಪಿಸಲಾಗಿದ್ದು ಆಂದೋಲನದ ರೀತಿಯಲ್ಲಿ ಹಮ್ಮಿಕೊಂಡಿರುವುದರಿಂದ ಜಿಲ್ಲೆಯ ಎಲ್ಲಾ ವಿಕಲಚೇತನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಆರ್.ಡಬ್ಲ್ಯೂ ಮತ್ತು ಎಂ.ಆರ್.ಡಬ್ಲ್ಯೂಗಳನ್ನು ಸಂಪರ್ಕಿಸಬಹುದು.
ತಾಲ್ಲೂಕು ಎಂ.ಆರ್. ಡಬ್ಲ್ಯೂ ಗಳ ದೂರವಾಣಿ ಸಂಖ್ಯೆ ಚನ್ನಪ್ಪ ಬಿ-9590829024, ಸುಬ್ರಮಣ್ಯಂ ಕೆ -9945738141, ಶೈಲಜಾ ಕೆ.ಎಂ.-9886366809 ಶಿವನಗೌಡ ಎಂ.ಕೆ-9902105734, ಗಂಗಾಧರ ಕೆ.ಹೆಚ್-9844955315 ಹಾಗೂ ವಿಕಲಚೇತನರ ಸಹಾಯವಾಣಿ ಮತ್ತು ಮಾಹಿತಿ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ 08192-263939 ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಧಿಕಾರಿ ಜಿ.ಎಸ್. ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನಕ್ಕೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ಕೋರ್ಸುಗಳಾದ ದ್ವಿತೀಯ ಪಿ.ಯು.ಸಿ. ಮತ್ತು ಪದವಿ ,ಸ್ನಾತಕೋತ್ತರ ಪದವಿ ವಾರ್ಷಿಕ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಗೆ ಪ್ರೊತ್ಸಾಹಧನ ನೀಡಲು ಅನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಸಕ್ತ ಅಭ್ಯರ್ಥಿಗಳು ಸಮಾಜ ಕಲ್ಯಾಣ ಇಲಾಖಾ www.sw.kar.nic.in ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ. ಅರ್ಜಿ ಹಾಕಿದ ಪ್ರತಿಯೊಂದಿಗೆ ಅಗತ್ಯ ದಾಖಲೆಗಳನ್ನು ಪ್ರಾಂಶುಪಾಲರ ದೃಢೀಕರಣದೊಂದಿಗೆ ಆಯಾ ತಾಲ್ಲೂಕಿನ ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಜಂಟಿ ನಿರ್ದೇಶಕಾರಾದ ನಾಗರಾಜ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಸತಿ ಯೋಜನೆ ; ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪಾಲಿಕೆ ವ್ಯಾಪ್ತಿಯಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ; ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಿಥಿಲವಾಗಿರುವ ಮನೆಗಳು ಹಾಗೂ ಖಾಲಿ ನಿವೇಶನ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ವಾಜಪೇಯಿ ವಸತಿ ಯೋಜನೆಯಡಿ ಸಾಮಾನ್ಯದಡಿ 177 ಮನೆಗಳು ಲಬ್ಯವಿದ್ದು ಸಹಾಯಧನವಾಗಿ ರೂ.2.70 ಲಕ್ಷ ಮತ್ತು ಡಾ; ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪರಿಶಿಷ್ಟ ಪಂಗಡದ 18 ಮನೆಗಳು ಲಭ್ಯವಿದ್ದು ರೂ.3.50 ಲಕ್ಷ ಸಹಾಯಧನ ನೀಡಲಾಗುತ್ತದೆ.
ಆಸಕ್ತರು ಗಂಡ, ಹೆಂಡತಿ ಇಬ್ಬರ ಆಧಾರ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪತ್ರ, ಬ್ಯಾಂಕ್ ಪಾಸ್ ಬುಕ್, ಚಾಲ್ತಿ ಇ-ಸ್ವತ್ತು, ಇಸಿ ನಕಲು, 2 ಭಾವಚಿತ್ರ ಪ್ರತಿಯೊಂದಿಗೆ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಲು ಆಯುಕ್ತರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅ.9 ರಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಅಹವಾಲು ಸ್ವೀಕಾರ
ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಎಸ್ ಕೌಲಾಪೂರೆ ಅವರು ಅಕ್ಟೋಬರ್ 9 ರಂದು ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಸಲ್ಲಿಸಿದ ಅರ್ಜಿಗಳನ್ನು ವಿಲೇ ಮಾಡದೇ ಬಾಕಿ ಇಟ್ಟಿರುವ ಕುರಿತ ದೂರುಗಳನ್ನು ಸಲ್ಲಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಎಂಬ್ರಾಯ್ಡರಿ ಮತ್ತು ಆರಿ ವರ್ಕ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
-
ದಿನದ ಸುದ್ದಿ6 days ago
ಗನ್ ಮಿಸ್ ಫೈರ್ | ಬಾಲಿವುಡ್ ನಟ ಗೋವಿಂದ ಆಸ್ಪತ್ರೆಗೆ ದಾಖಲು
-
ದಿನದ ಸುದ್ದಿ6 days ago
ಈ ದಿನ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನ
-
ದಿನದ ಸುದ್ದಿ6 days ago
ದಿವಾಕರ. ಡಿ ಮಂಡ್ಯ ಅವರಿಗೆ ಪಿ ಎಚ್ ಡಿ ಪದವಿ
-
ದಿನದ ಸುದ್ದಿ6 days ago
ನಾಲ್ಕನೇ ಮದುವೆಗೆ ಸಜ್ಜಾದ್ರು ನಟಿ ವನಿತಾ ವಿಜಯಕುಮಾರ್
-
ದಿನದ ಸುದ್ದಿ6 days ago
ಚಿನ್ನದ ಬೆಲೆ ಇಳಿಕೆ