Connect with us

ದಿನದ ಸುದ್ದಿ

ಅರಿಮೆಯ ಅರಿವಿರಲಿ-40 : ವಿದ್ಯಾವಂತರ ಮತಿಘಾತ

Published

on

  • ಯೋಗೇಶ್ ಮಾಸ್ಟರ್

ವರ್ಗದವರಿಗೆ ವಿದ್ಯಾಭ್ಯಾಸವಾಗಿರುತ್ತದೆ, ಆರ್ಥಿಕವಾಗಿ ಸಬಲರಾಗಿರುತ್ತಾರೆ. ಮನೆಯ ಜವಾಬ್ದಾರಿಗಳಿರುತ್ತವೆ. ಉನ್ನತ ಹುದ್ದೆಯೂ ಇರುತ್ತದೆ. ಸರ್ಕಾರದ ಅಥವಾ ಇನ್ನಾವುದಾದರೂ ಸಾಮಾಜಿಕ ಸಂಸ್ಥೆಯ ಭಾಗವೂ ಆಗಿರುತ್ತಾರೆ. ತೆರಿಗೆದಾರರಾಗಿರುತ್ತಾರೆ. ಅವರೂ ಕೂಡಾ ದೊಂಬಿ ಗಲಭೆ ಮಾಡುವವರ ಹಿಂಸಾತ್ಮಕ ಮನಸ್ಥಿತಿ ಮತ್ತು ಅಸಹನೀಯ ಧೋರಣೆಗಳನ್ನು ಹೊಂದಿರುತ್ತಾರೆ.

ಆದರೆ ಅವರು ನೇರವಾಗಿ ರಸ್ತೆಗೆ ಇಳಿಯುವುದಿಲ್ಲ. ಆದರೆ ಅಂತವು ಆಗಬೇಕೆಂದು ಬಯಸುತ್ತಾರೆ.
ಅವರಲ್ಲಿ ಕೆಲವರಿಗಂತೂ ನಾಗರಿಕ ದಂಗೆ, ದೊಂಬಿ, ದಾಳಿಗಳೂ ಕ್ರೀಡೆಗಳೇ, ಮನರಂಜನೆಗಳೇ. ಏಕೆಂದರೆ ಈ ಗಲಾಟೆ, ದೊಂಬಿ ಅವರಿಗೆ ಸೋಕದು. ಅವರು ಯಾವಾಗಲೂ ಸುರಕ್ಷಿತ. ಹಿಂದೆ ಕತ್ತಿಕಾಳಗವೇ ಮೊದಲಾಗಿ ಹೊಡೆದಾಟದ ರಕ್ತಸಿಕ್ತ ಕ್ರೀಡೆಗಳನ್ನು ಕ್ರೀಡಾಂಗಣದಲ್ಲಿಯೇ “ಭಲೇ ಭಲೇ” ಎಂದು ಗ್ಲ್ಯಾಡಿಯೇಟರ್‍ಗಳನ್ನು ಹುರಿದುಂಬಿಸುತ್ತಿದ್ದ ಪೂರ್ವಜರ ರಕ್ತದ ವಾಸನೆ ಇನ್ನೂ ಇವರಲ್ಲಿ ಜೀವಂತವಾಗಿದೆ.

ಮಕ್ಕಳು ಚಿಟ್ಟೆಯ ರೆಕ್ಕೆ ಕೀಳುವುದನ್ನು, ನಾಯಿಯ ಬಾಲಕ್ಕೆ ಸರ ಪಟಾಕಿಯನ್ನು ಕಟ್ಟುವುದನ್ನು, ಕತ್ತೆಯ ಬಾಲಕ್ಕೆ ಡಬ್ಬ ಕಟ್ಟಿ ಓಡಿಸುವುದನ್ನು, ಓತಿಕ್ಯಾತನ ಹಿಡಿದು ರಸ್ತೆಗೆಸೆದು ಅದರ ಮೇಲೆ ವಾಹನ ಹರಿಯುವುದ ನೋಡುವುದನ್ನು, ಇರುವೆಗಳನ್ನು ಹೊಸಕುವುದನ್ನು ಅಲ್ಲಲ್ಲಿ ನೋಡುತ್ತಿರುತ್ತೇವೆ. ಈ ಮಕ್ಕಳದು ಕ್ರೌರ್ಯಾಮೋದ ಅಥವಾ ಸ್ಯಾಡಿಸ್ಟ್ ಕುಶಿ ಎಂದು ಅನಿಸಲಿಲ್ಲವೇ? ಮಕ್ಕಳಿಗೆ ಗೊತ್ತಾಗುವುದಿಲ್ಲ, ಈಗ ಹಾಗೆ ಮಾಡುವುದು ಸಹಜ, ದೊಡ್ಡವರಾದ ಮೇಲೆ ಸರಿಹೋಗುತ್ತಾರೆ ಎಂದು ಎಂದೂ ಅಂದುಕೊಳ್ಳಬೇಡಿ.

ಈ ಮಕ್ಕಳು ದೊಡ್ಡವರಾದ ಮೇಲೆ ವಿದ್ಯಾವಂತರೂ, ಬುದ್ಧಿವಂತರೂ, ಅಧಿಕಾರಿಗಳೂ, ಜವಾಬ್ದಾರಿಯುತ ಸ್ಥಾನ, ಸಾಮಾಜಿಕ ಮಾನ್ಯತೆಗಳನ್ನು ಹೊಂದಿದ್ದರೂ ಸಾಮಾಜಿಕ ಅಸ್ವಾಸ್ಥ್ಯಕ್ಕೆ, ಕ್ರೌರ್ಯಕ್ಕೆ ತಮ್ಮ ಕಾಣ್ಕೆಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೀಡುತ್ತಿರುತ್ತಾರೆ. ಏಕೆಂದರೆ ಅವರ ಮನಸ್ಸಿನ ಆಳದಲ್ಲಿ ಅಜ್ಞಾತವಾಗಿ ಕೆಲಸ ಮಾಡುತ್ತಿರುವ ಅನೇಕ ವಿಷಯಗಳಿರುತ್ತವೆ. ಅಡಗಿರುವ ಕಾರಣಗಳ ಮೂಲಗಳನ್ನು ಹೀಗೇ ಎಂದು ನಿರ್ಧಿಷ್ಟವಾಗಿ ಬೊಟ್ಟು ಮಾಡಿ ಹೇಳಲಾಗದಿದ್ದರೂ ಒಂದಷ್ಟು ಮೂಲಗಳನ್ನು ಗುರುತಿಸಬಹುದು.

ಸಾಮಾನ್ಯವಾಗಿ ಇರಬಹುದಾದ ಮನೋಜ್ಞಾತ ಕಾರಣಗಳೆಂದರೆ;

1. ಸಾಂಪ್ರದಾಯಕವಾದಂತಹ (ಜಾತಿ/ಧರ್ಮದ) ವೈಷಮ್ಯದಿಂದ ಸೇಡಿನ ಭಾವವನ್ನು ಹೊಂದಿರುತ್ತಾರೆ.

2. ತಮಗಿರುವ ಆರ್ಥಿಕ ಸಬಲತೆಯಿಂದಾಗಿ, ಸಾಮಾಜಿಕ ಸ್ಥಾನಮಾನದ ಭದ್ರತೆಯಿಂದಾಗಿ, ರಾಜಕೀಯ ಮತ್ತು ವ್ಯವಸ್ಥೆಯಲ್ಲಿರುವವರ ಕೃಪೆ ಅಥವಾ ಸ್ಥಾನದಿಂದಾಗಿ
ಭಯವಿರದವರಾಗಿರುತ್ತಾರೆ.

3. ಅಹಂಕಾರ, ಢಂಬಾಚಾರಗಳೂ ಕೂಡಾ ಕಂದಾಚಾರಗಳಂತೆ ಕುಟುಂಬಗಳಲ್ಲಿ ತಲೆಮಾರುಗಳಿಂದಲೇ ಬಂದಿರುತ್ತವೆ. ನಾವು, ನಮ್ಮ ಮನೆತನದವರು ಯಾರಿಗೂ ತಲೆ ಬಾಗಲ್ಲ. ನಾವಿರುವುದೇ ಆಳುವುದಕ್ಕೆ. ನಮ್ಮ ತಾತ ಮುತ್ತಾತಂದಿರು ಇಷ್ಟು ದರ್ಪದಿಂದ ಆಳುತ್ತಿದ್ದರು ಅಥವಾ ವರ್ತಿಸುತ್ತಿದ್ದರು; ಇಂತಹ ಧೋರಣೆಗಳು ಪ್ರತಿಷ್ಟೆಯ ಸಂಕೇತಗಳಾಗಿರುತ್ತವೆ. ಹಾಗಾಗಿ ಅವರಲ್ಲಿ ಇತರರನ್ನು ಸಮಾನವಾಗಿ ನೋಡುವುದು, ಸೌಹಾರ್ದದಿಂದ ಇರುವುದು, ಇತರರ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಇರುವುದೇ ಇಲ್ಲ. ಹಾಗೆ ಇತರರದನ್ನು ಒಪ್ಪಿಕೊಳ್ಳುವುದು ತಮ್ಮ ಘನತೆಗೆ ಚ್ಯುತಿ ಎಂಬಂತಹ ಮನೋಭಾವ ಇರುತ್ತದೆ.

ಇನ್ನು ಔದಾರ್ಯವೆಂಬುದು ಅಥವಾ ಅಂತಃಕರುಣವೆಂಬುದು ಕೂಡಾ ಇರುವುದಿಲ್ಲ.
ಇವರು ಸಮಾಜಮುಖಿಯಾಗಿ ಚಿಂತನೆ ಮಾಡುವುದಿರಲಿ, ಹಾಗೆ ಮಾಡುವುದರಿಂದ ನಮಗೇನು ಲಾಭ ಎಂದು ಕೇಳುತ್ತಾರೆ. ನಮ್ಮದನ್ನು ನಾವು ನೋಡಿಕೊಂಡರಾಗದೇ ಎಂದು ಭಾವಿಸುತ್ತಾರೆ. (ಯಾರನ್ನಾದರೂ ಬೊಟ್ಟು ಮಾಡಿ ಅವರು ಹಾಗಿಲ್ಲ ಎನ್ನಬೇಡಿ. ಸಾಮಾನ್ಯವಾಗಿರುವುದಕ್ಕೆ ಅಪರೂಪವಾಗಿ ಅಪವಾದವಾಗಿರುವ ಉದಾಹರಣೆಗಳು ಇದ್ದೇ ಇರುತ್ತವೆ.)

4. ಬಾಲ್ಯದಲ್ಲಿಯೇ ಮೊಳಕೆಯೊಡೆದಿದ್ದ ಕ್ರೌರ್ಯಾಮೋದ (ಸ್ಯಾಡಿಸಂ) ಮನಸ್ಥಿತಿಯು ಗಮನಕ್ಕೆ ಮತ್ತು ಚಿಕಿತ್ಸೆಗೆ ಒಳಪಡದೇ ವಯಸ್ಕರಾದಾಗ ಸದೃಢವಾಗಿ ಬೆಳೆದಿರುತ್ತದೆ. ತಾವು ರಣಕ್ಕಿಳಿಯದೇ, ಇತರರನ್ನು ಗ್ಲ್ಯಾಡಿಯೇಟರ್‍ಗಳನ್ನಾಗಿ ಮಾಡಿ ಕಣಕ್ಕಿಳಿಸುತ್ತಾರೆ. ಇಲ್ಲಿ ಸಮಾಜ ಘಾತುಕತನದಲ್ಲಿ ಎರಡು ವರ್ಗಗಳಿವೆ. ಒಂದು ಭೌತಿಕವಾಗಿ ನೇರ ಸಮಾಜದ ಮೇಲೆ ಬೆಂಕಿಯಂತೆ ಉರಿದಾಳಿ ಮಾಡುವುದು.

ಮತ್ತೊಂದು ತಣ್ಣನೆ ತಮ್ಮ ಸ್ವಾರ್ಥದ ಹೊದಿಕೆಯಲ್ಲಿ ಬೆಚ್ಚಗಿದ್ದು ಮೊದಲನೆಯ ವರ್ಗದ ಸೃಷ್ಟಿಗೆ ಕಾರಣವಾಗುವುದು. ಇವರಲ್ಲಿ ಬಹುಪಾಲು ಅಪರಾಧಿಗಳಾಗಿ ಗುರುತಿಸಲ್ಪಡುವುದಿಲ್ಲ. ಆದರೆ, ಅಪರಾಧಿಗಳನ್ನು ರೂಪಿಸುವುದರಲ್ಲಿ ಬಹಳ ಗಂಭೀರವಾದ ಪ್ರೇರಣೆಗಳಾಗಿರುತ್ತಾರೆ. ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

ಬಾಲ ಬಾಸ್

ಕೊಂಚ ಸ್ಥಿತಿವಂತರ ಅಥವಾ ಅಧಿಕಾರಸ್ಥರ ಮಕ್ಕಳು ಬಾಸ್‍ಗಳಾಗಿದ್ದು ತಮಗೆ ಒಂದಷ್ಟು ಬಾಲಗಳನ್ನು ಇಟ್ಟುಕೊಂಡಿರುತ್ತಾರೆ. ಕೆಲವು ಸಲ ಕುಟುಂಬದ ಹಿನ್ನೆಲೆ ಏನೂ ಇಲ್ಲದಿದ್ದರೂ ಶಕ್ತಿವಂತ ಹುಡುಗರು ಬಾಸ್‍ಗಳಾಗಿ ವರ್ತಿಸುವುದುಂಟು. ಆದರೆ ಸಾಮಾನ್ಯವಾಗಿ ಕುಟುಂಬದ ಆರ್ಥಿಕ ಮತ್ತು ಅಧಿಕಾರದ ಹಿನ್ನೆಲೆ ಮಕ್ಕಳಲ್ಲಿ ಸಾಕಷ್ಟು ಕೆಲಸ ಮಾಡುತ್ತದೆ.

ಶಾಲೆಗಳಲ್ಲಿ ಮತ್ತು ಮನೆಯ ಬಳಿಯ ಆಟದ ಮೈದಾನಗಳಲ್ಲಿ ಸ್ಥಿತಿವಂತ ಮಕ್ಕಳು ಸ್ಥಿತಿವಂತರಲ್ಲದ ಮಕ್ಕಳನ್ನು ಅಥವಾ ದೈಹಿಕವಾಗಿ ಅಥವಾ ಮಾನಸಿಕವಾಗಿ ಅಷ್ಟೇನೂ ಸಬಲರಲ್ಲದ ಗೆಳೆಯರನ್ನು ಬಾಲಗಳನ್ನಾಗಿ ನಡೆಸಿಕೊಳ್ಳುವ ರೀತಿಗಳನ್ನು ಪಾಲಕರೂ ಮತ್ತು ಶಿಕ್ಷಕರೂ ಗಮನಿಸಬೇಕು.

ಆ ಮಕ್ಕಳೋ ತಮಗಿರುವ ಮೇಲರಿಮೆಯ ಕಾರಣದಿಂದ, ಮನೆಯಲ್ಲಿ ಅನುಸರಿಸಿರುವ ಮಾದರಿಯ ದೆಸೆಯಿಂದ ತಮ್ಮ ಬಾಲಗಳಿಗೆ ಕೆಲಸಗಳನ್ನು ಹೇಳುತ್ತಿರುತ್ತಾರೆ. ಅವರು ಗೆಳೆಯರೇ ಆಗಿದ್ದರೂ ಒಬ್ಬ ಇನ್ನೊಬ್ಬನ ಮೇಲೆ ಮೇಲಧಿಕಾರವನ್ನು ಪಡೆದಿರುತ್ತಾರೆ. ಕೆಲವು ಸಲ ತಿನಿಸು ಅಥವಾ ಬೇರೆ ವಸ್ತುಗಳನ್ನು ಕೊಡುವ ಕಾರಣವಿರಬಹುದು. ಕೆಲವು ಸಲ ಏನೂ ಇಲ್ಲದೆಯೇ ಅಧಿಕಾರ ಚಲಾಯಿಸುತ್ತಾರೆ.

ಆಡುವಾಗ ಚೆಂಡು ದೂರದಲ್ಲಿ ಬಿದ್ದರೆ ಬಾಲವನ್ನೇ ಕಳುಹಿಸುವುದು, ಕಾಂಪೋಂಡಿನ ಒಳಗೆ ಅಥವಾ ಸಜ್ಜೆ ಮೇಲೆ ಬಿದ್ದರೆ ಬಾಲವನ್ನೇ ಹತ್ತಿಸುವುದು. ಚೇಷ್ಟೆ ಅಥವಾ ತರಲೆ ಮಾಡುವಾಗ ಬಾಲವನ್ನು ಸಿಕ್ಕಿಸಿ ತಾನು ಮೆಲ್ಲನೆ ಜಾರಿಕೊಳ್ಳುವುದು. ಅಂಗಡಿಯಿಂದ ಅಥವಾ ಇನ್ನೆಲ್ಲಿಂದಾದರೂ ಏನಾದರೂ ತರಿಸಿಕೊಳ್ಳುವುದಿದ್ದರೆ ಬಾಲವನ್ನೇ ಓಡಿಸುವುದು. ಬಾಲಬಾಸ್‍ಗಳು ಎಷ್ಟೋ ವಿಷಯಗಳಲ್ಲಿ ತಾವು ಅಪರಾಧಿಗಳಾಗದೆಯೇ ತಮ್ಮ ಬಾಲಗಳನ್ನು ಅಪರಾಧಿಗಳನ್ನಾಗಿ ರೂಪಿಸುತ್ತಾರೆ.

ಹೀಗೆ ಯಾವುದಾದರೂ ಪ್ರಕರಣದಲ್ಲಿ ಸಿಕ್ಕಿಕೊಂಡಾಗ ಬಾಲವನ್ನು ಕೇಳಿ, “ನೀನ್ಯಾಕೆ ಅವನು ಹೇಳಿದ ಹಾಗೆ ಕೇಳ್ತೀಯಾ?” ಎಂದು. ಪಾಪ ಬಾಲಗಳಲ್ಲಿ ಉತ್ತರವಿರುವುದಿಲ್ಲ. ಸುಮ್ಮನೆ ತಲೆ ತಗ್ಗಿಸಿ ನಿಂತುಕೊಳ್ಳುತ್ತವೆ. ಮತ್ತೆ ಬಾಸ್ ಹಿಂದೆ ಬಾಲಗಳಾಗಿ ಹೋಗುತ್ತವೆ. ಏಕೆಂದರೆ ಹಾಗೆ ಹೋಗುವುದು ಅವರಿಗೂ ರೂಢಿಯಾಗಿರುತ್ತದೆ. ಹಾಗೆ ಬಾಲಗಳನ್ನು ತಮ್ಮ ಹಿಂಬಾಲಕರನ್ನಾಗಿಸಿಕೊಳ್ಳುವುದು ಬಾಸ್‍ಗಳಿಗೂ ರೂಢಿಯಾಗಿಬಿಟ್ಟಿರುತ್ತವೆ.

ಯಾವುದೇ ಮಗುವು ತಾನೇ ಎದ್ದು ಹೋಗಿ ತನ್ನ ವಸ್ತುವನ್ನು ತರಬಹುದಾಗಿದ್ದರೂ ಮತ್ತೊಂದು ಮಗುವಿಗೆ ಆ ಕೆಲಸವನ್ನು ಮಾಡಲು ಹೇಳುತ್ತದೆ ಎಂದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಇದು ಬರಿಯ ಸೋಮಾರಿತನದ ವಿಷಯ ಮಾತ್ರವೇ ಅಲ್ಲ. ತನ್ನ ಮೇಲರಿಮೆಯ ಅಹಂಕಾರದ ತೃಪ್ತಿಗೆ ಮನುಷ್ಯರನ್ನು ಬಳಕೆ ಮಾಡಿಕೊಳ್ಳುವುದು. ಇದು ಕ್ರಮೇಣ ತನ್ನ ಇತರ ಸಹಜೀವಿಗಳನ್ನು ದಾಸ್ಯಕ್ಕೆ ಒಳಪಡಿಸಿಕೊಳ್ಳುವ ಮುನ್ಸೂಚನೆ. ಬಾಲಬಾಸ್‍ಗಳು ಗ್ಲ್ಯಾಡಿಯೇಟರ್‍ಗಳನ್ನು ರೂಪಿಸಿ ಭಲೇ ಭಲೇ ಎಂದು ರಕ್ತಸಿಕ್ತ ಕ್ರೀಡೆಗಳನ್ನು ಆನಂದಿಸುವವರು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

Published

on

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

“ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆ ಅನುಸರಣೆ ಹಾಗೂ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ” ಎಂದು ಮೇಘವಾಲ್ ತಿಳಿಸಿದರು.”

ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ” ಎಂದು ಮೇಘವಾಲ್ ವಿವರಿಸಿದ್ದಾರೆ.”

ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ

Published

on

ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಮೊನ್ನೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ ನಂತರ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 3 ರೂಪಾಯಿ ಹಾಗೂ ಡೀಸೆಲ್ 3.5 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 8 ಸಾವಿರದ 500 ರೂಪಾಯಿಗಳನ್ನು ವರ್ಗಾವಣೆ ಮಾಡುವ ಭರವಸೆಯನ್ನು ಈಡೇರಿಸುವ ಬದಲು, ಕಾಂಗ್ರೆಸ್ ಆಡಳಿತದ ಕರ್ನಾಟಕ ಸರ್ಕಾರವು, ರಾಜ್ಯದ ಜನರಿಗೆ ಹೊರೆಯಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ. ಇಂತಹ ನಿರ್ಧಾರ ಹಣದುಬ್ಬರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ಬೂಟಾಟಿಕೆ ಬಹಿರಂಗಪಡಿಸುತ್ತದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಗಳಿಂದ 12 ರೂಪಾಯಿಗಳಷ್ಟು ಹೆಚ್ಚುವರಿ ವ್ಯಾಟ್ ಅನ್ನು ವಿಧಿಸುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬಸ್ ದರ, ಹಾಲಿನ ದರ, ಅಗತ್ಯ ವಸ್ತುಗಳ ದರ ಹೆಚ್ಚಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತದ ವ್ಯವಸ್ಥೆ ಕುಸಿದುಹೋಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ, ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವ್ಯಾಟ್ ಹೆಚ್ಚಳ ಬಳಿಕ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ದರ ಕಡಿಮೆ ಇದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರಕ್ಕಿಂತಲ್ಲೂ ಹಾಗೂ ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತಲ್ಲೂ ನಮ್ಮ ರಾಜ್ಯದಲ್ಲಿ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರ ತೆರಿಗೆ ಕಡಿಮೆ ಮಾಡಿದ್ದರೂ, ಕೇಂದ್ರ ಸರ್ಕಾರ ಪದೇ ಪದೆ ವ್ಯಾಟ್ ಹೆಚ್ಚಳ ಮಾಡಿತ್ತು ಎಂದು ಆರೋಪಿಸಿದ್ದಾರೆ. ರಾಜ್ಯದ ತೆರಿಗೆ ಹೆಚ್ಚಳದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಷಹಾರ | ಹೋಟೆಲ್, ರೆಸ್ಟೋರೆಂಟ್ ತಪಾಸಣೆಗೆ ಕ್ರಮ

Published

on

ಸುದ್ದಿದಿನಡೆಸ್ಕ್: ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಉತ್ತಮ ಗುಣಮಟ್ಟ, ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೋಟೇಲ್, ರೆಸ್ಟೋರೆಂಟ್ ಹಾಗೂ ಲಘು ಉಪಹಾರ ಕೇಂದ್ರಗಳಲ್ಲಿ The Food Safety and Standards Act-2006 ಮತ್ತು 2011 ನಿಯಮಗಳಲ್ಲಿ ಸೂಚಿಸಿರುವ ಮಾರ್ಗಸೂಚಿಯಂತೆ ತಪಾಸಣೆ ನಡೆಸಿ ಸೂಕ್ತ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೋಟೆಲ್, ರೆಸ್ಟೋರೆಂಟ್ ಹಾಗೂ ಲಘು ಉಪಹಾರ ಕೇಂದ್ರಗಳಲ್ಲಿ ಸ್ವಚ್ಚತೆ ಇಲ್ಲದೆ, ಕಲುಷಿತ, ವಿಷಹಾರ ಸೇವನೆ, ಕಲಬೆರಕೆ ಪದಾರ್ಥಗಳು, ಅವಧಿ ಮೀರಿದ ಪದಾರ್ಥಗಳ ಉಪಯೋಗಿಸುತ್ತಿರುವಂತೆ ಘಟನೆಗಳು ಸಂಭವಿಸುತ್ತಿದ್ದು, ರಾಮೇಶ್ವರ ಕೆಫೆ, ಇಂದಿರಾನಗರ ಬೆಂಗಳೂರು ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಂಡದಲ್ಲಿ ವರದಿಯಾಗಿರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending