Connect with us

ಅಂತರಂಗ

ಧರ್ಮ ಮರ್ಮ – 09 : ದೀನ್ ವಿಶ್ವಾಸಿ

Published

on

Art : Megan Duncanson
  • ಯೋಗೇಶ್ ಮಾಸ್ಟರ್

ಧರ್ಮ ಮತ್ತು ದೇವರಿಗೆ ಸಂಬಂಧ ಕಲ್ಪಿಸಿದವನು ವ್ಯಕ್ತಿ. ಯಾವ ದೇವರೂ ಧರ್ಮವನ್ನು ಸ್ಥಾಪಿಸಲಿಲ್ಲ. ದೇವರೆಂಬುವ ಪರಿಕಲ್ಪನೆ ನಮ್ಮ ಪೂರ್ವಿಕರಲ್ಲಿ ಯಾವುದ್ಯಾವುದೋ ಕಾರಣಗಳಿಂದ ಮೂಡಿತ್ತು ಮತ್ತು ಅದರ ಕೋಪಕ್ಕೆ ಗುರಿಯಾಗದಿರಲು ಮತ್ತು ಅದರ ಅನುಗ್ರಹಕ್ಕೆ ಪಾತ್ರವಾಗಲು ನಾನಾ ದಾರಿಗಳನ್ನು ಕಂಡುಕೊಳ್ಳುತ್ತಿದ್ದರು. ಪ್ರಕೃತಿಯಲ್ಲಿನ ಸೂರ್ಯನಂತೆ ಅಥವಾ ನೀರಿನಂತೆ ದೇವರ ಪರಿಕಲ್ಪನೆಯು ಅತ್ಯಂತ ಸಮೃದ್ಧವಾಗಿ ಮತ್ತು ಮುಕ್ತವಾಗಿ ಎಲ್ಲರಿಗೂ ದೊರಕಿತ್ತು.

ಬೈಬಲ್ಲಿನ ಆದಿಕಾಂಡದಲ್ಲಿ ತನ್ನ ದೇವರು ಸೃಷ್ಟಿಯ ಕೆಲಸವನ್ನು ಮುಗಿಸುತ್ತಾನೆ. ನಂತರ ‘ತನ್ನ ಸ್ವರೂಪದ ಪ್ರತಿರೂಪವಾಗಿ ಮನುಷ್ಯನನ್ನು ನಿರ್ಮಿಸುತ್ತಾನೆ’ ಎಂದಿದೆ. ಆದರೆ ವಿಷಯವೇನೆಂದರೆ ಮನುಷ್ಯ ತನ್ನ ಸ್ವರೂಪಕ್ಕೆ ಪ್ರತಿರೂಪವಾಗಿ ದೇವರನ್ನು ಸೃಷ್ಟಿಸಿಕೊಂಡ. ತಾನು ವಾಸಿಸುವ ಪ್ರಕೃತಿಯಲ್ಲಿ ಎಲ್ಲಾ ವಸ್ತುಗಳ, ಪ್ರಕೃತಿಯ ಇತರ ಎಲ್ಲಾ ಜೀವಿಗಳ ಮೇಲೆ ಅಧಿಪತ್ಯ ಸಾಧಿಸಲು ಆಶಿಸಿದ್ದ ಮತ್ತು ತನಗೆ ಆ ಸಾಮರ್ಥ್ಯ ಇದೆ ಎಂದೂ ಅವನಿಗೆ ಅನ್ನಿಸಿತ್ತು. ಅದಕ್ಕಾಗಿ ದೇವರ ಬಾಯಿಂದಲೇ ಅದನ್ನು ಹೊರಡಿಸಿದ.

‘ಸಮುದ್ರದಲ್ಲಿರುವ ಮೀನುಗಳ ಮೇಲೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳ ಮೇಲೆ, ನೆಲದ ಮೇಲೆ ಓಡಾಡುವ ಎಲ್ಲಾ ಪ್ರಾಣಿಗಳ ಮತ್ತು ಹರಿದಾಡುವ ಕೀಟಗಳ ಮೇಲೆ, ಎಲ್ಲಾ ಭೂಮಿಯ ಮೇಲೆ ತಾನು ಸೃಷ್ಟಿಸುವ ಈ ಮನುಷ್ಯನಿಗೆ ಒಡೆತನವಿರಲಿ. ಎಲ್ಲಾ ಜೀವಿಗಳ ಮೇಲೆ ದೊರೆತನ ಮಾಡಿರಿ’ ಎಂದು ತನ್ನ ಆಸೆಯನ್ನು ದೇವರ ಬಾಯಿಂದ ಹೇಳಿಸಿದ. ಅದೇನೇ ಇರಲಿ, ತನ್ನ ರೂಪದ ಪ್ರತಿರೂಪದಲ್ಲಿ ಮನುಷ್ಯನ ಸೃಷ್ಟಿ ಮಾಡಿದ ಚಿತ್ರವನ್ನು ತನ್ನ ಕುಂಚದಲ್ಲಿ ಸೆರೆ ಹಿಡಿದ ಮೈಕಲ್ಯಾಂಜಲೋ ಓರ್ವ ಅಪ್ರತಿಮ ಕಲೆಗಾರ.

ಆದಮನ ಸೃಷ್ಟಿ

ದೇವರನ್ನು ವಯಸ್ಸಾದ ಪ್ರಬುದ್ಧ ವೃದ್ಧನಂತೆ ಚಿತ್ರಿಸಿ, ಎಳೆಯ ಯುವಕನಂತೆ ಆದಮನನ್ನು ಚಿತ್ರಿಸಿರುವ ಮೈಕಲ್ಯಾಂಜಲೋ ಮನುಷ್ಯನಿಗೆ ದೇವರಿಂದ ಜೀವಪ್ರಧಾನವಾಗುತ್ತಿರುವಂತೆ ಚಿತ್ರಿಸಿದ್ದಾರೆ. ಚಿತ್ರಪಟದ ಬಲಭಾಗದಲ್ಲಿ ಹಾರಾಡುತ್ತಿರುವ ದೇವರು ತನ್ನ ಗಣಗಳೊಂದಿಗೆ ಬೆತ್ತಲೆಯಾಗಿ ಆರಾಮವಾಗಿ ಅರೆಶಯನದಲ್ಲಿರುವ ಯುವ ಆದಾಮನಿಗೆ ತನ್ನ ತೋರು ಬೆರಳಿಂದ ಚೈತನ್ಯವನ್ನು ನೀಡುತ್ತಿದ್ದಾನೆ.

ಅದು ಅವನನ್ನು ಮುಟ್ಟಿಸಿಲ್ಲ. ಆ ಚಿತ್ರರೂಪಕಕ್ಕೆ ಬೇಕಾದಷ್ಟು ವಿವರಣೆಗಳನ್ನು ಕೊಡುತ್ತಾರೆ. ಅದೊಂದು ಅದ್ಭುತವಾದಂತಹ ಕಲಾಕೃತಿ, ಸಂಶಯವಿಲ್ಲ. ಇದೇ ಬಗೆಯಲ್ಲಿ ಆದಿಕಾಂಡದ ಕತೆಯೂ ಒಂದು ಸಾಹಿತ್ಯ ರೂಪಕವೆಂದು ಸಾಲುಗಳ ನಡುವೆ ಓದಲು ನಮ್ಮಲ್ಲಿ ಸಂಯಮವಿಲ್ಲ.

ಸುಮ್ಮನೆ ತರ್ಕಕ್ಕೆ ಹೀಗೆ ವಿಚಾರ ಮಾಡೋಣ. ಮನುಷ್ಯನಿಗಿಂತ ಮುನ್ನ ತಾನು ಬಹು ಪ್ರೇಮದಿಂದ, ಆಸ್ತೆಯಿಂದ ಸೃಷ್ಟಿಸಿದ ಪ್ರಕೃತಿಗೆ ಗೊಂದಲದ, ವಿಧ್ವಂಸಕ, ಕಿಲಾಡಿತನದ ಬುದ್ಧಿ ಮತ್ತು ಮನಸ್ಸುಳ್ಳ ಮನುಷ್ಯನಿಗೆ ದೊರೆತನ ನೀಡುತ್ತಾನೆಯೇ? ತನ್ನ ಸುಂದರ ಸೃಷ್ಟಿಯನ್ನು ತಾನೇ ನಾಶ ಪಡಿಸಿಕೊಳ್ಳಲು ಅವನು ಬಯಸುತ್ತಾನೆಯೇ?

ಹೋಗಲಿ, ಮುಂದೊಂದು ದಿನ ಮನುಷ್ಯ ಅದೆಷ್ಟು ಕೆಟ್ಟು ಕೆರ ಹಿಡಿದು ನಿಸರ್ಗವನ್ನು ನಾಶ ಮಾಡುತ್ತಾ ಮತ್ತು ತನ್ನ ಮನುಷ್ಯ ಜನಾಂಗಗಳಲ್ಲೇ ಹೊಡೆದಾಡಿಕೊಂಡು ಕೊಲ್ಲುತ್ತಿರುತ್ತಾನೆ ಮತ್ತು ಕೊಲ್ಲಲ್ಪಡುತ್ತಿರುತ್ತಾನೆ ಎಂದು ಭವಿಷ್ಯ ತಿಳಿಯದೇ ಹೋದನೇ?

ಅದು ಹಾಗಲ್ಲ. “ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ” ಎಂದು ಪುರಂದರ ದಾಸರು ಎಚ್ಚರಿಸುತ್ತಾರೆ. ತನಗೆ ಆಲೋಚನೆ, ಸಂಕಲ್ಪ, ವಿವೇಚನೆ ಮಾಡುವ ಕಾರಣದಿಂದ ತಾನು ಜಗತ್ತಿನ ಎಲ್ಲಾ ಜೀವಿಗಳಿಗಿಂತ ಶ್ರೇಷ್ಟ ಎಂಬ ಅಹಂಕಾರ ಹೊಂದಿ ವಿಧ್ವಂಸಕನಾಗಿರುವ ಪರಿಯನ್ನು ನೋಡಿಯೇ ಅಧ್ಯಾತ್ಮದಲ್ಲಿ ಈ ವಿಶ್ವದಲ್ಲಿ ನೀನು ಎಷ್ಟು ಸಣ್ಣವ. ಬಂದು ಹೋಗುವವನಷ್ಟೇ. ನಿನಗೆ ಸಾವಿದೆ.ನೀನು ಇಲ್ಲಿ ಶಾಶ್ವತವಾಗಿ ಇರುವುದಿಲ್ಲ ಎಂದು ಜಗತ್ತಿನ ಮೂಲೆ ಮೂಲೆಗಳಿಂದ ಮನುಷ್ಯನ ಮನಸ್ಸಿನ ವಿಕೃತಿಗಳನ್ನು, ಕ್ರೌರ್ಯಗಳನ್ನು ಮತ್ತು ಶೋಷಣೆಗಳನ್ನು ಕಂಡು ಹೆದರಿದ ಕಾಳಜಿ ಇದ್ದ ಕರುಣಾಳುಗಳೆಲ್ಲರೂ ದೇವರೆಂಬ ಬೃಹತ್ತಾದ ಪರಿಕಲ್ಪನೆಯನ್ನು ಮುಂದೆ ನಿಲ್ಲಿಸಿ ಎಚ್ಚರಿಸುತ್ತಿದ್ದರು.

“ಕಾಲನ ದೂತರು ಕಾಲ್ಪಿಡಿದೆಳೆವಾಗ, ತಾಳು ತಾಳೆಂದರೆ ತಾಳುವರೆ. ಧಾಳಿ ಬಾರದ ಮುನ್ನ ಧರ್ಮವ ಗಳಿಸಿರೋ” ಎಂದು ಪುರಂದರ ದಾಸರು ಸುಕೃತಕ್ಕೆ ಬದಲಾಗಿ ಮನಸ್ಸನ್ನು ವಿಕೃತವಾಗಿಸಿಕೊಳ್ಳುವ ಹುಚ್ಚಪ್ಪಗಳಿಗೆ ಹೇಳುತ್ತಾರೆ. ಯಾವುದು ಅವರು ಹೇಳುವ ಧರ್ಮ? ಅದು ನಮ್ಮ ಮನಸ್ಸಿನ ಆಲೋಚನೆಗಳಿಗೆ ಮತ್ತು ಲೆಕ್ಕಾಚಾರಗಳಿಗೆ ಮೀರಿರುವ ಸತ್ಯವೂ ಹೌದು ಮತ್ತು ಅದರ ಪ್ರಕಾರ ನಡೆದುಕೊಳ್ಳುವುದರ ಕ್ರಮ ಅಥವಾ ಮಾರ್ಗವೂ ಹೌದು.

ಆ ಸತ್ಯವೇ, ಆ ಉತ್ಕೃಷ್ಟ ಸಾರವೇ ದೀನ್. ಅದಕ್ಕೆ ದಾರಿಯನ್ನು ತೋರಲೆಂದೇ ದೇವರೆಂಬ ಬೆಚ್ಚಪ್ಪನನ್ನು ಮುಂದಿರಿಸಿದ್ದು, ಕ್ರಮವನ್ನು ರೂಪಿಸಿದ್ದು ಮತ್ತು ಮಾರ್ಗವನ್ನು ತೋರಿದ್ದು. ಆ ಧರ್ಮವೇ, ಆ ಮಾರ್ಗವೇ, ವಿನಯದಿಂದ ಅನುಸರಿಸುವ ಕ್ರಮವೇ ದೀನ್. ಶರಣು ಎಂಬುದು ಧ್ವನಿಸುವಂತಹ ದೀನಭಾವದ ದನಿ ಈ ದೀನ್.

ಕಾಬಾ ಭವನದ ಮೇಲೆ ದಾಳಿ

ಪ್ರವಾದಿ ಮುಹಮ್ಮದರ ತಾತ ಅಬ್ದುಲ್ ಮುತ್ತಲಿಬ್. ಅವರು ಸರದಾರರಾಗಿದ್ದರು. ಮಕ್ಕಾದಲ್ಲಿ ಅವರ ವಾಸ.ಕಾಬಾದಲ್ಲಿರುವ ಅಲ್ಲಾಹನ ಭವನವನ್ನು ಕಂಡರೆ ಯಮನ್ ದೇಶದ ರಾಜನಾದ ಅಬ್ರಹನಿಗೆ ಅಸಹನೆ ಮತ್ತು ಅಸೂಯೆ. ಆತ ಕ್ರೈಸ್ತ ಮತ್ತು ಅರೇಬಿಯಾದಲ್ಲಿ ತನ್ನ ನಿರ್ಮಾಣದ ಕ್ರೈಸ್ತ ದೇಗುಲ ಕೇಂದ್ರಾಕರ್ಷಣೆಯಾಗಬೇಕೆಂದು ಅವನ ಬಯಕೆ. ಕಾಬಾದ ಭವನವನ್ನು ನಾಶ ಮಾಡಲು ಸೈನ್ಯದೊಂದಿಗೆ ಬಂದ. ಆದರೆ ಅವನಿಗೇನೂ ಸರದಾರರಾಗಿದ್ದ ಅಬ್ದುಲ್ ಮುತ್ತಲಿಬ್ ಅವರಲ್ಲಿ ದ್ವೇಶವೇನೂ ಇರಲಿಲ್ಲ.

ಕಾಬಾವನ್ನು ಕೆಡವುವ ಕೆಲಸಕ್ಕೆ ಅಡ್ಡಿ ಬಂದರೆ ತಾನು ಜನರ ಮೇಲೆ ಆಕ್ರಮಣ ಮಾಡುವುದಾಗಿ ದೊಡ್ಡ ಸೈನ್ಯವನ್ನು ಮುಂದಿಟ್ಟುಕೊಂಡಿರುವ ಅಬ್ರಹ ಸಂದೇಶ ಕಳುಹಿಸಿದ. ಆದರೆ ಅವನು ಮಕ್ಕಾಗೆ ಬರುವಾಗಲೇ ತನ್ನ ದೋಚುವ ಕೆಲಸಕ್ಕೆ ತೊಡಗಿದ್ದು ಅದರಲ್ಲಿ ಅಬ್ದುಲ್ ಮುತ್ತಲಿಬ್ಬರ 200 ಒಂಟೆಯನ್ನೂ ಸೆರೆ ಹಿಡಿದುಕೊಂಡಿದ್ದ.

ರಾಜನ ರಾಯಭಾರಿ ಅಬ್ದುಲ್ ಮುತ್ತಲಿಬ್ಬರ ಬಳಿಗೆ ಬಂದು ತನ್ನ ರಾಜನ ಉದ್ದೇಶ ತಿಳಿಸಿದಾಗ, ಅವರು ರಾಜನನ್ನು ಕಾಣಲು ಹೋದರು. ಸರದಾರರ ವರ್ಚಸ್ಸಿನಿಂದಾಗಿ ಅವರ ಮೇಲೆ ರಾಜನಿಗೆ ಬಹಳ ಗೌರವವೂ ಮೂಡಿತ್ತು. “ನಾವು ಬಂದಿರುವುದು ನಿಮಗೆ ಏಕೆಂದು ತಿಳಿದಿದೆ. ನೀವು ನಮಗೆ ಏನು ಹೇಳಬೇಕೆಂದಿರುವವರೋ ಅದನ್ನು ಹೇಳಿ” ಎಂದ ಅಬ್ರಹ.

“ನೀವು ವಶಪಡಿಸಿಕೊಂಡಿರುವ ನಮ್ಮ ಒಂಟೆಗಳನ್ನು ಬಿಟ್ಟುಬಿಡಿ” ಎಂದು ಅಬ್ದುಲ್ ಮುತ್ತಲಿಬ್ಬರು ಹೇಳಿದರು. ಅಬ್ರಹನಿಗೆ ಆಶ್ಚರ್ಯವಾಯಿತು. ತಮ್ಮ ಪೂರ್ವಜರು ಆರಾಧಿಸಿಕೊಂಡು ಬಂದಿರುವ ಅಲ್ಲಾಹನ ಭವನವನ್ನು ಕೆಡವಲು ಬಂದಿದ್ದೇನೆ ಎಂದರೆ ಈ ವ್ಯಕ್ತಿ ಅದೆಷ್ಟು ಲೌಕಿಕವಾಗಿ ತಮ್ಮ ಒಂಟೆಗಳನ್ನು ಬಿಟ್ಟುಬಿಡಿ ಎನ್ನುತ್ತಾರಲ್ಲಾ! ಆ ಕಾಬಾದ ಮಂದಿರಕ್ಕಿಂತ ತನ್ನ ಒಂಟೆಗಳೇ ಮುಖ್ಯವೇ? ಧಾರ್ಮಿಕ ಶ್ರದ್ಧೆಗೆ ಆದ್ಯತೆ ಇಲ್ಲವೇ ಎಂದು ಅವನ ಪ್ರಶ್ನೆ. ಯಾಕೆ ಹೀಗೆ ಎಂದು ಅಬ್ರಹ ಕೇಳುವನು.

“ನಾನು ಈ ಒಂಟೆಗಳ ಒಡೆಯ. ಅದಕ್ಕಾಗಿ ಅದರ ಬಗ್ಗೆ ನಾನು ಮಾತಾಡುತ್ತೇನೆ. ಕಾಬಾದ ಭವನದ ಒಡೆಯ ಅಲ್ಲಾಹ್. ಅದನ್ನು ಅವನು ರಕ್ಷಿಸಿಕೊಳ್ಳುವನು” ಎಂದು ತಮ್ಮ ನಿಜವಾದ ಹೊಣೆಗಾರಿಕೆಯ ಬಗ್ಗೆ ಬದ್ಧತೆ ಪ್ರದರ್ಶಿಸುವುದು ಒಂದಾದರೆ, ಅಲ್ಲಾಹನ ಮೇಲಿನ ವಿಶ್ವಾಸ ಇನ್ನೊಂದು ಬಗೆಯದು. ತಾನು ಒಬ್ಬ ಶ್ರದ್ಧಾವಂತನಾಗಿ ಅಲ್ಲಾಹನ ಭವನವನ್ನು ತಾನು ರಕ್ಷಿಸುವೆನೆಂಬ ಉದ್ಧಟನವನ್ನು ತೋರದಿರುವುದರಲ್ಲಿ ದೇವರ ಶಕ್ತಿಯ ಮೇಲಿನ ವಿಶ್ವಾಸವನ್ನು ಪ್ರಕಟಿಸುತ್ತದೆ.

“ಅಲ್ಲಾಹ್ ಅದನ್ನು ನನ್ನಿಂದ ರಕ್ಷಿಸಿಕೊಳ್ಳಲಾಗುವುದಿಲ್ಲ” ಎಂದು ಯಮನ್ ದೊರೆ ಅಬ್ರಹನು ಅಬ್ದುಲ್ ಮುತ್ತಲಿಬ್ಬರನ್ನು ಕೆಣಕಿದರೂ ಅವರು ಪ್ರಚೋದನೆಗೆ ಒಳಗಾಗುವುದಿಲ್ಲ. ಅವರು ಹೇಳುವುದಿಷ್ಟು, “”ರುಗಿಸುತ್ತಾನೆ. ಮುಂದೆ ಕಾಬಾ ಮೇಲಿನ ದಾಳಿಯು ವಿಫಲವಾಗಿ ಅಬ್ರಹ ಸತ್ತು ಅವನ ಸೈನ್ಯ ಪಲಾಯನಗೊಳ್ಳುತ್ತದೆ. ಆನೆಗಳ ವರ್ಷ ಎಂದು ಕರೆಯುವ ಅದರ ವಿವರ ಸಧ್ಯಕ್ಕೆ ಇಲ್ಲಿ ಬೇಡ. ಅದರ ಬಗ್ಗೆ ಮುಂದೆ ಬರುತ್ತದೆ. ಆದರೆ ನಾನು ಪ್ರಸ್ತಾಪಿಸಲು ಇಷ್ಟಪಡುವ ವಿಷಯವೇನೆಂದರೆ ತಾವು ನಂಬಿರುವ ದೇವರ ಮೇಲಿನ ವಿಶ್ವಾಸದಲ್ಲಿ ತಮ್ಮ ವಿನಯತೆಯನ್ನು ಪ್ರದರ್ಶಿಸುವ ಅಬ್ದುಲ್ ಮುತ್ತಲಿಬ್ಬರ ಧೋರಣೆ. ಅಲ್ಲಿ ಅಹಂಕಾರದ ಆರ್ಭಟವಿಲ್ಲ.

ದೇವರ ಭವನವನ್ನು ತಾವು ರಕ್ಷಿಸುವೆವು ಎಂಬ ಉದ್ಧಟತನವಿಲ್ಲ. ತಮ್ಮ ಶ್ರದ್ಧೆಯ ಕೇಂದ್ರದ ಮೇಲೆ ದಾಳಿ ಮಾಡಲು ಬಂದವರೊಂದಿಗೆ ವಂದಿಸಿ ಕುಳಿತುಕೊಂಡು ಮಾತಾಡುವ ವಿನಯವಂತಿಕೆ ಇದೆ. ತಮಗೆ ಏನಾಗಬೇಕು ಎಂದು ಸರಳವಾಗಿ ಮತ್ತು ನೇರವಾಗಿ ಹೇಳುವಂತಹ ಸ್ಪಷ್ಟತೆ ಇದೆ. ಇದು ಅಬ್ದುಲ್ ಮುತ್ತಲಿಬ್ಬರ ಅಲ್ಲಾಹನ ಮೇಲಿನ ವಿಶ್ವಾಸ ಮತ್ತು ಆತ್ಮ ವಿಶ್ವಾಸ ಕೂಡ. ಇಂತಹ ಧೋರಣೆ ಮತ್ತು ವರ್ತನೆಗಳ ಪರಂಪರೆಯ ಮನೆಯ ಮಗು ಮುಹಮ್ಮದ್. ಸಹಜವಾಗಿ ಅವು ರೂಢಿಗೆ ಬರುತ್ತವೆ. ಅದು ವಿಸ್ತಾರವಾಗುವುದು ಅವರ ಜನಾನುರಾಗದಿಂದ.

ಜೊತೆಗೆ ತಾತ ಸರದಾರರಾಗಿದ್ದರೂ, ತಾತನ ಪ್ರೀತಿ ವಾತ್ಸಲ್ಯಗಳನ್ನು ಅದೆಷ್ಟೇ ಪಡೆದಿದ್ದರೂ ಬಾಲ್ಯದಲ್ಲಿಯೇ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಅನಾಥ ಪ್ರಜ್ಞೆ ಅವರ ಭಾವುಕ ಸಂಬಂಧಗಳನ್ನು ಮತ್ತಷ್ಟು ಸೂಕ್ಷ್ಮಗೊಳಿಸಿದ್ದಿತ್ತು. ಕುಟುಂಬದ ಸಂಬಧಗಳನ್ನು ಮೀರುವ ವಾತ್ಸಲ್ಯದ ನೈತಿಕತೆಯನ್ನು ತಾನು ವಾಸಿಸುತ್ತಿದ್ದ ಗೊಂದಲದ ಮತ್ತು ಕೆಡುಕಿನ ಸಮಾಜಕ್ಕೆ ಮುಹಮ್ಮದ್ ಬೋಧಿಸಬೇಕಿತ್ತು. ಅದಕ್ಕೆ ಕುರಾನ್ ಎಂಬ ಮಾರ್ಗಸೂಚಿ ಬೇಕಾಗಿತ್ತು.

ವಿಗ್ರಹಾರಾಧನೆ, ದಾಸ್ಯ, ಶೋಷಣೆ, ಕ್ರೌರ್ಯ, ಸಂಘರ್ಷ, ಹೆಣ್ಗೂಸುಗಳ ಹತ್ಯೆ; ಇಂತವೆಲ್ಲಾ ಪ್ರಚಲಿತದಲ್ಲಿದ್ದ ಸಮಾಜಕ್ಕೆ, ಆ ಕಾಲದ ಅಗತ್ಯಕ್ಕೆ, ನೈತಿಕ ಮಾರ್ಗಕ್ಕೆ ತಾವು ಮಾರ್ಗದರ್ಶಿಯಾಗಿ ನಿಲ್ಲಬೇಕಾದ ಅಗತ್ಯವನ್ನು ಅವರು ಮನಗಂಡರೆಂದು ಕಾಣುತ್ತದೆ. ಅದು ಅವರ ಸಮಾಜಮುಖಿ ಚಿಂತನೆ, ಜೀವಪರ ಕಾಳಜಿ.

ಹೇಗೆ ಯೇಸುವು ಅಂತಹುದ್ದೇ ಒಂದು ಕೆಟ್ಟುಕೊಳೆಯುತ್ತಿದ್ದ ಸಮಾಜಕ್ಕೆ ತಾನು ಬೆಳಕು, ಸತ್ಯ ಮತ್ತು ಮಾರ್ಗವಾಗಿ ಬರಬೇಕೆಂದು ನಿರ್ಧರಿಸಿಕೊಂಡಿದ್ದರೋ ಅದೇ ಬಗೆಯಲ್ಲಿ ಈಗ ಇಲ್ಲಿ ಮುಹಮ್ಮದ್ ಮುಂದಾದರು. ಕುರಾನಿನ ಮೊದಲ ಅಧ್ಯಾಯವು ಇಸ್ಲಾಮಿನ ಪ್ರವೇಶಿಕೆಯಾಗಿ ನನಗೆ ತೋರುತ್ತದೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ‌ಪ್ರಕಟ

Published

on

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.

‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ

ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ  ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ  ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending