ದಿನದ ಸುದ್ದಿ
ಎಲ್ಲಾ ಬುದ್ಧರುಗಳ ಬೋಧನೆಯ ತಿರುಳೆ ಈ ಗಾಥೆ..!
- ಶಿವಸ್ವಾಮಿ, ಬೌದ್ಧುಪಾಸಕರು
“ಸಬ್ಬ ಪಾಪಸ್ಸ ಅಕರಣಂ,
ಕುಸಲಸ್ಸ ಉಪಸಂಪದಾ,
ಸಚಿತ್ತ ಪರಿಯೋದಪನಂ,
ಏತಂ ಬುದ್ಧಾನಸಾಸನಂ “
– ಧಮ್ಮಪದ, -183.
ಈ ಗಾಥೆಯು ಒಬ್ಬ ಸಾಧಕನು ಅಷ್ಟಾಂಗ ಮಾರ್ಗವನ್ನು ತನ್ನ ನಿತ್ಯಜೀವನದಲ್ಲಿ ಹೇಗೆ ಪಾಲಿಸಬೇಕೆಂಬುದನ್ನು ಹೇಳುತ್ತದೆ.
‘ಸಬ್ಬ ಪಾಪಸ್ಸ ಅಕರಣಂ‘ – ಕೆಟ್ಟದನ್ನು ಮಾಡದಿರುವುದು ಅಂದರೆ ಸರಿಯಾದ ಮಾತಾನ್ನಾಡುವ,ಸರಿಯಾದ ಕೆಲಸವನ್ನು ಮಾಡುವ ಮತ್ತು ಸರಿಯಾದ ಜೀವನೋಪಾಯದ ವಿಚಾರಕ್ಕೆ ಸಂಬಂಧಿಸಿದೆ.ಯಾರು ಮಾತು,ಕೃತಿ ಮತ್ತು ಸಂಪಾದನೆಯಲ್ಲಿ ಕೆಡಕನ್ನು ಮಾಡುವುದಿಲ್ಲವೋ ಅವರು ಶೀಲವನ್ನು ಪಾಲಿಸುತ್ತಾರೆ.
‘ಕುಸಲಸ್ಸ ಉಪಸಂಪದಾ‘, ಕುಶಲವನ್ನು ಸಂಪಾದಿಸುವುದು ಧ್ಯಾನಕ್ಕೆ (ಸಮಾಧಿ) ಸಂಬಂದಿಸಿರುವುದು ಸರಿಯಾದ ಪ್ರಯತ್ನ,ಸರಿಯಾದ ಮಾನಸಿಕ ಜಾಗ್ರತೆ ಮತ್ತು ಸರಿಯಾದ ಏಕಾಗ್ರತೆ ಒಳಗೊಂಡಿದೆ. ಯಾರು ಸಮತಾ ಧ್ಯಾನದ ಮೂಲಕ ಮನಸ್ಸನ್ನ ತರಬೇತಿಗೊಳಿಸಿಕೊಳ್ಳುತ್ತಾರೊ ಅವರು ಅನಂದವನ್ನು ಬೆಳೆಸಿಕೊಳ್ಳುತ್ತಾರೆ.ಆ ಮೂಲಕ ಚೇತೋ ವಿಮುಕ್ತಿಯನ್ನು ( ಮನಸ್ಸಿನಿಂದ ಬಿಡುಗಡೆ) ಪಡೆಯುತ್ತಾರೆ.
‘ಸಚಿತ್ತ ಪರಿಯೋದಪನಂ‘, ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳುವುದು ಪ್ರಜ್ಞೆಗೆ ಸಂಬಂಧಪಟ್ಟಿದೆ. ಈ ಪ್ರಜ್ಞೆಯಲ್ಲಿ ಸರಿಯಾದ ದೃಷ್ಟಿ ಮತ್ತು ಸರಿಯಾದ ಸಂಕಲ್ಪ ಅಥವಾ ಆಲೋಚನೆ ಸೇರಿಕೊಂಡಿವೆ. ಯಾರು ವಿಪಸ್ಸನ ಧ್ಯಾನದ ಮೂಲಕ ಮನಸ್ಸನ್ನು ವಿಕಸನಗೊಳಿಸುತ್ತಾರೊ ಅವರು ಎಷ್ಟೇ ಸೂಕ್ಷ್ಮ ವಿರುವ ಮಾನಸಿಕ ಕೊಳಕುಗಳನ್ನು ಬುಡಮೇಲು ಮಾಡಿ ಆ ಮೂಲಕ ಮನಸ್ಸು ಪರಿವರ್ತನೆಯಾಗಿ ಸಂಸಾರ ಬಂಧನದಿಂದ (ಮತ್ತೆ ಮತ್ತೆ ಹುಟ್ಟುವ) ಬಿಡುಗಡೆ ಹೊಂದುತ್ತಾರೆ.
ಶೀಲ ಸಮಾಧಿ ಪ್ರಜ್ಞೆ ಈ ಮೂರನ್ನು ಸಾಧನೆಯಲ್ಲಿ ತರುವುದೆಂದರೆ ಮೂರು ರೀತಿಯ ಭಿನ್ನವಾಗಿದೆ ಮಾನಸಿಕ ಕ್ರಿಯೆಗಳು ಮತ್ತು ಬದುಕಿನ ರೀತಿಗಳಾಗಿವೆ.ಇವು ಯಾವುವೆಂದರೆ ಸಿಕ್ಖಾ (ತರಬೇತಿ), ಭಾವನಾ (ಮನಸ್ಸಿನ ಬೆಳವಣಿಗೆ) ಮತ್ತು ವಿಶುದ್ಧಿ (ಮನಸ್ಸಿನ ಶುದ್ಧೀಕರಣ) ಸಿಕ್ಖಾ ಎಂದರೆ ಶೀಲದ ಮೂಲಕ ತನ್ನನ್ನು ತಾನೇ ತಯಾರು ಮಾಡಿಕೊಳ್ಳುವುದು – ಅದು ಪಂಚಶೀಲಗಳು ಮತ್ತು ಅಷ್ಟಶೀಲಗಳು ದಶಶೀಲಗಳು ಹಾಗೆಯೇ 227 ಭಿಕ್ಕು ನಿಯಮಗಳು ಅಥವಾ ಸನ್ಯಾಸಿ ನಿಯಮಗಳು.
ಒಬ್ಬನು ತನ್ನನ್ನು ಕಮ್ಮ ವಾಚಾ,ಕಮ್ಮ ಕಮ್ಮಂತ, ಕಮ್ಮ ಆಜೀವ(ಮಾತು ಕ್ರಿಯೆ ಜೀವನೋಪಾಯ) ಶೀಲಗಳ ಮೂಲಕ ಗುಣವರ್ಧನೆ ಮತ್ತು ನೈತಿಕ ಬಲವನ್ನು ಹೊಂದುತ್ತಾನೆ.ಶೀಲವನ್ನು ಶ್ರಿಮಂತಗೊಳಿಸಿದಷ್ಟೂ ಆತನ ನಡವಳಿಕೆ ಶುದ್ಧವಾಗಿ ಮನಸ್ಸು ಪರಿಶುದ್ಧವಾಗುತ್ತದೆ.
ಯಾರು ಧ್ಯಾನದಲ್ಲೇ ಸಾಧನೆಗೈದು ಮುಂದುವರಿಯುತ್ತಾರೊ ಅವರು ಮಾನಸಿಕ ಏಕಾಗ್ರತೆಯನ್ನು ಬೆಳೆಸಿಕೊಳ್ಳುತ್ತಾರೆ.ಈ ಮೂಲಕ ಮಾನಸಿಕ ಸ್ಥಿತಿಗಳಿಗೂ ಮೀರಿದ ಸಮಾಧಿ ಸ್ಥಿತಿ ಅಥವಾ ಜಾನದ ಹಂತಕ್ಕೆ ತಲುಪುತ್ತಾರೆ. ಬೌದ್ಧ ಧಮ್ಮದಲ್ಲಿ 40 ಕ್ಕೂ ಹೆಚ್ಚು ರೀತಿಯ ಧ್ಯಾನಗಳಿವೆ ಪ್ರಮುಖವಾದವು ಸಮತಾ ಮತ್ತು ವಿಪಸ್ಸನಾ,ಸಮತಾ ಧ್ಯಾನವು ಸಮಾಧಿಯ ವಿವಿಧ ಸ್ತರಗಳಿಗೆ ಕೊಂಡೊಯ್ದು ಮನಸ್ಸನ್ನು ಉನ್ನತ ಸ್ಥಿತಿಗಳಿಗೆ ಕರೆದೊಯ್ಯುತ್ತದೆ,ಮನಸ್ಸು ಎಲ್ಲ ರೀತಿಯ ಮಾನಸಿಕ ಅಡೆತಡೆಗಳಿಂದ ಅಂದರೆ ಧ್ಯಾನ ಶೀಲ ಪಾರಮಾರ್ಥಿಕ ಬೆಳವಣಿಗೆಗೆ ಅಡ್ಡಿ ಬರುವ ಸಂಗತಿಗಳಿಂದ ಮುಕ್ತವಾಗುತ್ತದೆ.ಹೀಗೆ ಒಬ್ಬನು ಉತ್ತಮ ಸ್ಥಿತಿಗಳತ್ತ ಸಾಗುತ್ತಾನೆ.
ಈ ಮಾನಸಿಕ ಅಡೆತಡೆಗಳು ಇಂದ್ರಿಯ ಸಂಬಂಧ ಆಸೆಗಳು,ದ್ವೇಷ, ಸೋಮಾರಿತನ, ಅಶಾಂತಿ ಅನುಮಾನ.ಒಮ್ಮೆ ಮನಸ್ಸು ಅಡೆತಡೆಗಳಿಂದ ಹೊರತಾದಲ್ಲಿ ಚಿತ್ತವಿಶುದ್ಧಿಯಾಗುತ್ತದೆ.ಮನಸ್ಸೊಂದೇ ಶುದ್ಧಿಯಾಗುವುದರಿಂದ ಸಂಸಾರಿಕ ತಾಪತ್ರಯಗಳಿಂದ ಮುಕ್ತಿ ದೊರಕದು.ಉತ್ತಮ ಮಾನಸಿಕ ಸ್ಥಿತಿಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಒಬ್ಬನು ಹಲವಾರು ಲೋಕೋತ್ತರ ಶಕ್ತಿಗಳನ್ನು ಅಥವಾ ಜ್ಞಾನದ ಸ್ಥಿತಿಗಳನ್ನು ಪಡೆಯುತ್ತಾನೆ.
ಯಾರು ಸಮತಾ ಧ್ಯಾನಕ್ಕಿಂತ ಭಿನ್ನವಾದ ವಿಪಸ್ಸನಾ ಧ್ಯಾನದಲ್ಲಿ ಸಾಧನೆಗೈಯುತ್ತಾರೊ ಅವರು ವಾಸ್ತವತೆಗಳ ವಿಭಿನ್ನ ಹಂತಗಳನ್ನು ಬೆಳೆಸಿಕೊಳ್ಳುತ್ರಾರೆ. ಧ್ಯಾನಾವಸ್ಥೆಯ ಈ ವಿವಿಧ ಮಜಲುಗಳು ಮಾನಸಿಕ ಕೊಳಕುಗಳನ್ನು ಬುಡಮೇಲು ಮಾಡಿ ಮನಸ್ಸನ್ನು ಪರಿಶುದ್ಧಗೊಳಿಸುವುದಲ್ಲದೆ ಪರಿವರ್ತನೆಯನ್ನು ಮಾಡುತ್ತವೆ. ಪರಿವರ್ತಿತಗೊಂಡ ಮನಸ್ಸು ಲೋಕೀಯ ಚಿತ್ತದಿಂದ ಲೋಕೋತ್ತರ ಚಿತ್ತಸ್ಥಿತಿಗೆ ಹೊಗುತ್ತದೆ.
4 ರೀತಿಯ ಲೋಕೋತ್ತರ ಚಿತ್ತ ಸ್ಥಿತಿಗಳಿವೆ;ಅಂದರೆ ಧ್ಯಾನದ ಉನ್ನತ ಸ್ಥಿತಿಯನ್ನು ಮೀರಿರುವ ನಿಬ್ಬಾಣವನ್ನು ಮುಟ್ಟಿರುವ ಚಿತ್ತ ಸ್ಥಿತಿ,ಕಾಮಲೋಕ (ಇಂದ್ರಿಯ ಸಂಬಂಧ ಆಸೆಗಳಿಂದ ಕೂಡಿದ ವಲಯ) ರೂಪಲೋಕ (ಸೂಕ್ಷ್ಮ ವಸ್ತುಗಳಿಂದ ಕೂಡಿದ ವಲಯ) ಅರೂಪ ಲೋಕ (ರೂಪರಹಿತ ಸಂಗತಿಗಳಿಂದ ಕೂಡಿದ ವಲಯ) ಈ ಮೂರು ರೀತಿಯ ಅಸ್ತಿತ್ವಗಳಿಂದ ಕೂಡಿದ ಲೋಕೀಯ ಚಿತ್ತಸ್ಥಿತಿಯನ್ನು ಮೀರಿರುವ ಲೋಕೋತ್ತರ ಚಿತ್ತ.
ತಾನೇ ತನ್ನ ಅಕುಶಲ ಕರ್ಮಗಳಿಂದ (ಪಾಳಿಯಲ್ಲಿ ಕಮ್ಮಗಳು )ಸೃಷ್ಟಿಸಿಕೊಂಡ ಸಂಯೋಜನೆಗಳನ್ನು ನಾಶಮಾಡಿಕೊಂಡ ಮೇಲೆ ಮನಸ್ಸು ಮೇಲೆ ಹೇಳಿದ ಮೂರು ಅಸ್ತಿತ್ವ ವಲಯಗಳನ್ನು ಮೀರುತ್ತಾ ಬಿಡುಗಡೆಯತ್ತಾ ಪಯಣಿಸುತ್ತಾದೆ.ಈ ಸಂಯೋಜನೆಗಳೇ ಮುಂದಿನ ಹುಟ್ಟಿಗೆ ಅಥವಾ ಪುನಬ್ಭವಕ್ಕೆ ಕೊಂಡಿಯಾಗುತ್ತವೆ.ಒಮ್ಮೆ ಈ ಸಂಯೋಜನೆಗಳು ಮುರಿದವೆಂದರೆ ಮನಸ್ಸು ಪ್ರಾಪಂಚಿಕ ಅಸ್ತಿತ್ವದಿಂದ ವಿಮುಕ್ತಿಗೊಳ್ಳುತ್ತದೆ.4 ಲೋಕೋತ್ತರ ಫಲ ಚಿತ್ತದಿಂದ ಉದ್ಭವವಾಗುವ 4 ಹಂತಗಳ ಬಿಡುಗಡೆ ಇದೆ.ಈ 4 ಲೋಕೋತ್ತರ ಸ್ಥಿತಿಗಳ ಸಂಯೋಜನೆಗಳನ್ನು ನಾಶ ಮಾಡುತ್ತಾ ಹೋಗುತ್ತದೆ ಈ ಮೂಲಕ ಮನಸ್ಸು ಬಿಡುಗಡೆಗೊಂಡು ಪರಿಶುದ್ಧವಾಗುತ್ತದೆ.
ಕೊನೆಯ ಸಾಲು “ಏತಂ ಬುದ್ಧಾನುಸಾಸನಂ” ಇದರಲ್ಲಿ 3 ರೀತಿಯ ತರಬೇತಿ ಭೋಧನೆ ಇದೆ
ಅವು ಸಿಕ್ಖಾ (ಮನಸ್ಸಿನ ತರಬೇತಿ),
ಭಾವನ (ಮನಸ್ಸಿನ ಬೆಳವಣಿಗೆ), ಮತ್ತು ವಿಶುದ್ಧಿ (ಪರಿಶುದ್ಧಿ) ಇವೇ ಎಲ್ಲಾ ಬುದ್ಧರುಗಳ ಭೋಧನೆಯ ತಿರುಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಸತಿ ಯೋಜನೆ ; ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪಾಲಿಕೆ ವ್ಯಾಪ್ತಿಯಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ; ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಿಥಿಲವಾಗಿರುವ ಮನೆಗಳು ಹಾಗೂ ಖಾಲಿ ನಿವೇಶನ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ವಾಜಪೇಯಿ ವಸತಿ ಯೋಜನೆಯಡಿ ಸಾಮಾನ್ಯದಡಿ 177 ಮನೆಗಳು ಲಬ್ಯವಿದ್ದು ಸಹಾಯಧನವಾಗಿ ರೂ.2.70 ಲಕ್ಷ ಮತ್ತು ಡಾ; ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪರಿಶಿಷ್ಟ ಪಂಗಡದ 18 ಮನೆಗಳು ಲಭ್ಯವಿದ್ದು ರೂ.3.50 ಲಕ್ಷ ಸಹಾಯಧನ ನೀಡಲಾಗುತ್ತದೆ.
ಆಸಕ್ತರು ಗಂಡ, ಹೆಂಡತಿ ಇಬ್ಬರ ಆಧಾರ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪತ್ರ, ಬ್ಯಾಂಕ್ ಪಾಸ್ ಬುಕ್, ಚಾಲ್ತಿ ಇ-ಸ್ವತ್ತು, ಇಸಿ ನಕಲು, 2 ಭಾವಚಿತ್ರ ಪ್ರತಿಯೊಂದಿಗೆ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಲು ಆಯುಕ್ತರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅ.9 ರಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಅಹವಾಲು ಸ್ವೀಕಾರ
ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಎಸ್ ಕೌಲಾಪೂರೆ ಅವರು ಅಕ್ಟೋಬರ್ 9 ರಂದು ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಸಲ್ಲಿಸಿದ ಅರ್ಜಿಗಳನ್ನು ವಿಲೇ ಮಾಡದೇ ಬಾಕಿ ಇಟ್ಟಿರುವ ಕುರಿತ ದೂರುಗಳನ್ನು ಸಲ್ಲಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸೇವಾಸಿಂಧು ಪೋರ್ಟಲ್ ಮೂಲಕ ಅಕ್ಟೋಬರ್.30 ರೊಳಗಾಗಿ ಸಲ್ಲಿಸಿ, ಸಲ್ಲಿಸಿದ ಅರ್ಜಿ ಮತ್ತು ದಾಖಲೆಗಳನ್ನು ಜಿಲ್ಲಾ ಸಂಯೋಜಕರು, ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ನಿಗಮ, ದಾವಣಗೆರೆ ಇಲ್ಲಿಗೆ ಸಲ್ಲಿಸಲು ಹಾಗೂ ಮೊ.ಸಂ:9845801361, 8105976617 ನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಎಂಬ್ರಾಯ್ಡರಿ ಮತ್ತು ಆರಿ ವರ್ಕ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಗನ್ ಮಿಸ್ ಫೈರ್ | ಬಾಲಿವುಡ್ ನಟ ಗೋವಿಂದ ಆಸ್ಪತ್ರೆಗೆ ದಾಖಲು
-
ದಿನದ ಸುದ್ದಿ6 days ago
ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
-
ದಿನದ ಸುದ್ದಿ6 days ago
ಈ ದಿನ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನ
-
ದಿನದ ಸುದ್ದಿ6 days ago
ನಾಲ್ಕನೇ ಮದುವೆಗೆ ಸಜ್ಜಾದ್ರು ನಟಿ ವನಿತಾ ವಿಜಯಕುಮಾರ್
-
ದಿನದ ಸುದ್ದಿ6 days ago
ಚಿನ್ನದ ಬೆಲೆ ಇಳಿಕೆ
-
ದಿನದ ಸುದ್ದಿ6 days ago
ದಿವಾಕರ. ಡಿ ಮಂಡ್ಯ ಅವರಿಗೆ ಪಿ ಎಚ್ ಡಿ ಪದವಿ