ರುಜು, ಸಂಶೋಧನಾ ವಿದ್ಯಾರ್ಥಿ, ದಾವಣಗೆರೆ ಅಂಗಲಾಚಿ ಬೇಡುವೆ… ಒಂದಿಷ್ಟು ಭೂಮಿ ಕೊಡಿಸಿ ಬದುಕು ಕಟ್ಟಿಕೊಳ್ಳಲು ಅಲ್ಲ ಸತ್ತ ನನ್ನ ಹೆಣದ ಗೂಡು ಕಟ್ಟಲು ಬೀಳುವ ನನ್ನ ಜನಗಳ ಹೆಣಗಳ ಹೂಳಲು. ಈ ಹಿಂದೆ ಸತ್ತ ನನ್ನ...
ಬಿ.ಶ್ರೀನಿವಾಸ, ದಾವಣಗೆರೆ ಮೊನ್ನೆ ದಿನದ ಹುಡುಗಿಯರಂತೆ ಕೂಗಿದ್ದಿದ್ದರೆ… ಸೀತೆ ಕಾಡಿಗೆ ಹೋಗುತ್ತಿರಲಿಲ್ಲ ಅಪಹರಣವಾಗುತ್ತಿರಲಿಲ್ಲ ದ್ರೌಪದಿಯ ಮಾನ ದಿಟ್ಟೆಯಂತೆ ಕೂಗಿದ್ದಿದ್ದರೆ.. ನಿಲ್ಲುತ್ತಲೇ ಇರಲಿಲ್ಲ ಅಹಲ್ಯೆ ಕಲ್ಲಾಗಿ! ಕೇವಲದ ಬಣ್ಣಗಳು ಆಗುತ್ತಿರಲಿಲ್ಲ ರಕ್ತವರ್ಣ! ಹಗಲುಗಳು ಬಣ್ಣ ಕಳೆದುಕೊಳ್ಳುತ್ತಿರಲಿಲ್ಲ ಬಣ್ಣ...
ಮೂಲ : ಬ್ರೆಕ್ಟ್ , ಭಾವಾನುವಾದ :ಡಾ. ಸಿದ್ದಲಿಂಗಯ್ಯ ಓ ಗೆಳತಿ ವ್ಲಾಸೋವ ನಿನ್ನ ಮಗನ ಕೊಂದರು ಹೋರಾಟದ ಜೀವಿಯನ್ನು ಒಡನಾಡಿ ಬಂಧುವನ್ನು ನಿನ್ನ ಮಗನ ಕೊಂದರು ಅವನಂಥ ಮೈಕೈಗಳು ಕಟ್ಟಿದಂಥ ಗ್ವಾಡೆ ತಾವು ಬಿಸಿಲೇರದ...
ಮೂಲ: ಬ್ರುನೋ ಶುಲ್ಜ್ , ಕನ್ನಡಕ್ಕೆ: ಸುಭಾಷ್ ರಾಜಮಾನೆ ನನಗೆ ಮತ್ತೊಮ್ಮೆ ಹೊರಗೆ ನಡೆದುಕೊಂಡು ಹೋಗಲು ದೊಡ್ಡ ಬಿಡುಗಡೆಯಂತೆ ಭಾಸವಾಗುತ್ತಿದೆ. ಆದರೆ ನಾನು ಎಷ್ಟೊಂದು ದೀರ್ಘ ಕಾಲದಿಂದ ಈ ಕೋಣೆಯೊಂದಿಗೆ ಬಂಧಿಯಾಗಿದ್ದೆ! ತುಂಬ ಕಹಿಯಾದ ದಿನಮಾನಗಳು....
ಮೂಲ : ಯೂಜೀನ್ ಮಾಂಟೇಲ್, ಕನ್ನಡಕ್ಕೆ : ಓ.ಎಲ್.ನಾಗಭೂಷಣ ಸ್ವಾಮಿ ಒರೆಸಿ ಬಿಡು ಬೇಕಾದರೆ ಗೋಳಿಡುವ ಈ ದುರ್ಬಲ ಬದುಕನ್ನು ಬೋರ್ಡಿನ ಮೇಲೆ ಬರೆದ ಅಲ್ಪಾಯುಷಿ ಅಕ್ಷರಗಳನ್ನು ಡಸ್ಟರು ಸುಮ್ಮನೆ ಒರೆಸಿಬಿಡುವ ಹಾಗೆ ನಿನ್ನ ವರ್ತುಲಕ್ಕೆ...
ಕೆ.ಶ್ರೀಧರ್ (ಕೆ.ಸಿರಿ), ಯುವಸಾಹಿತಿ ‘ಮಳೆ‘ಎಂದರೆ ಅದೊಂತರಹದ ವಿಶೇಷ ಪ್ರಕ್ರಿಯೆ ಮಡಿ-ಮೈಲಿಗೆ ಆಚರಿಸುವವರ ಆಚರಿಸದೆ ಇರುವವರ ಈರ್ವರ ಮಡಿ-ಮೈಲಿಗೆಗಳನ್ನ ಸ್ವಚ್ಛಗೊಳಿಸುತ್ತದೆ. ಒಂಥರಾ ಲೋಕದ ಸ್ನಾನ ಎಂದರೂ ತಪ್ಪಾಗಲಾರದು. ಸೂರ್ಯನನ್ನು ಮಣಿಸುವ ಶಕ್ತಿ ಇರುವುದು ಮೋಡಗಳಿಗೆ ಮಾತ್ರ ಸೂರ್ಯನನ್ನು...
ಪ್ರೊ.ಎಚ್. ಪಟ್ಟಾಭಿರಾಮ ಸೋಮಯಾಜಿ, ಮಂಗಳೂರು ಗಾಂಧಿ ಬಿಡಿ ಸರ್ ಭಾಳ ದೊಡ್ಮನ್ಷ ಸರ್ ನಂಗೊತ್ತು ತತ್ತ್ವನೇ ದೊಡ್ದು ಜೀವ ಅಲ್ಲ ಸರ್ ಈಶ್ವರ ಅಲ್ಲಾ ಅಂತ ಏನೇನೋ ಮುದ್ಕ ಬಡ್ಕೋತಿದ್ನಲ್ಲ ಸರ್ ಅಂವ ಸರಿ ಇಲ್ಲ...
ಪಿ. ಲಂಕೇಶ್ ಈತ ನನ್ನನ್ನು ಚಕಿತಗೊಳಿಸುತ್ತಾನೆ. ಮತ್ತೆ ಮತ್ತೆ ನನ್ನ ಮನಸ್ಸಿಗೆ ಬಂದು ಹೊಸ ಹೊಸ ತಿಳಿವಳಿಕೆಗೆ ಕಾರಣವಾಗುವ ಈತನನ್ನು ನಿಮ್ಮೊಂದಿಗೆ ನೆನೆಯಲು ಯತ್ನಿಸುತ್ತೇನೆ. ಈತ ಪ್ರಖ್ಯಾತ ಗುರುವಾಗಿದ್ದ; ಸಾವಿರಾರು ಮೈಲುಗಳಿಂದ ದೊರೆಗಳು, ಸೇನಾನಿಗಳು ಬಂದು...
ಮೆಹಬೂಬ್ ಮುಲ್ತಾನಿ ಹಾದು ಹೋಗುವ ಹಳೆದಾರಿಯೂ ಹೊಸತನ ಬಯಸುವಾಗ ಹಳೆ ಕವಿತೆಗಳು ಹೊಸ ರೂಪ ಪಡೆಯಬೇಕು ಮನಸ್ಸುಗಳೂ ಹೊರತಲ್ಲ ಸುಮ್ಮನೆ ಒಮ್ಮೆ ನನ್ನ ಮನ ಹೊಕ್ಕು ನೋಡಿ ನನ್ನ ನಾಟಕದ ಬಣ್ಣ ಮಾಸಿದ ಕವಲುಗಳು ಧುತ್ತನೆ...
ಅವ್ವ ಎಂದರೆ ಕರುಣೆ, ಅವ್ವ ಎಂದರೆ ವಾತ್ಸಲ್ಯ, ಅವ್ವ ಎಂದರೆ ಆಸರೆ, ಅವ್ವ ಎಂದರೆ ಹೋರಾಟ, ಅವ್ವ ಎಂದರೆ ತ್ಯಾಗ, ಅವ್ವ ಎಂದರೆ ಪ್ರೀತಿ, ಅವ್ವ ಎಂದರೆ ವಾತ್ಸಲ್ಯ. ಹಾಗಾಗಿ ಆಕೆಯನ್ನು ಏನೆಂದು ವರ್ಣಿಸಿದರೂ ಅದು...