Connect with us

ದಿನದ ಸುದ್ದಿ

ನನ್ನ ಹೆಸರಿನ ಪಜೀತಿ..! ನನ್ನ ಹೆಸರು ಹೇಗೆ ಬಂತು..?

Published

on

  • ಪರಶುರಾಮ್. ಎ

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಹೆಸರು ಇದ್ದೇ ಇರುತ್ತದೆ ಇರಲೇ ಬೇಕು ಸಹ. ಆ ವ್ಯಕ್ತಿ ಹೆಸರಿಗೂ ಇತಿಹಾಸದ ನಂಟು ಅಥವಾ ಒಂದು ಕತೆ ಇದ್ದೆ ಇರುತ್ತದೆ. ‌ಅವುಗಳನ್ನ ಕೆದಕಿ ನೋಡಿದಾಗ ಆ ಕತೆಗಳು ನೆನಪುಗಳಾಗಿ ಮೇಲೆದ್ದು ಕಾಣಿಸಿಕೊಳ್ಳುತ್ತದೆ.

ಈಗೀಗ ಜನ ಸಮಾಜದಲ್ಲಿ ಹೆಸರು ಮಾಡಲು ಏನೇನೂ ಸರ್ಕಸ್ ಮಾಡ್ತಾರಂತ ನಿಮಗೆ ಗೊತ್ತೇ ಇದೆ. ರಾಜಕೀಯ. ಸಿನಿಮಾ. ರೌಡಿಸಂ. ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌, ಡಬ್ ಸ್ಮಾಷ್. ಟಿಕ್ ಟಾಕ್ ನಲ್ಲಿ ಹುಚ್ಚರಾಗಿ ಹೆಸರು ಗಳಿಸಲು ನಾನಾ ತರದ ಸರ್ಕಸ್ ನಡಿತಾನೇ ಇದೆ. ಅವರ ಹೆಸರುಗಳು ಸಹ ವಿಚಿತ್ರ ವಿಚಿತ್ರವಾಗಿ ಇರ್ತವೆ!!! ಈ ವಿಚಿತ್ರ ಹೆಸರುಗಳ‌ ಖಯಾಲಿ ಸಿನೆಮಾ, ರೌಡಿಸಂ ಕ್ಷೇತ್ರದಲ್ಲಿ ಹೆಚ್ಚು.

ಹೆಸರಿನಲ್ಲಿ ಏನಿದೆ ಬಿಡ್ರೀ ಮಹತ್ವ?? ಅನ್ನುವವರಿಗೆ ಅವರ ಹೆಸರು ಒಮ್ಮೆ ಹಾಳಾದಗಲೇ ಅದರ ನೋವು ಗೊತ್ತಾಗುವುದು ಹೆಸರಿನ ಮಹತ್ವ!! ಅಂದಾಗೆ ನಾನು ನನ್ನ ಹೆಸರು ಹುಟ್ಟಿನ ಬಗ್ಗೆ ಹೇಳ್ತಿನಿ ಆಮೇಲೆ ಆ ಹೆಸರಿನಿಂದ ನನಗಾದ ಪಜೀತಿಗಳೆಷ್ಟು ಅಂತ ಹೇಳ್ತಿನಿ. ನಾನು ಹುಟ್ಟಿದಾಗ ನನಗೆ ನಾಮಕರಣ ಮಾಡಲು ಹೆಸರಿಡಲು ವಾಡಿಕೆಯಂತೆ ಜ್ಯೋತಿಷ್ಯ ಕೇಳಿದಾಗ ನನಗೆ ಡ,ಡು,ಡೆ ಎಂಬ ಪದಗಳು ಬಂದವಂತೆ.

ಹೋಗಿ ಹೋಗಿ ಎಂತ ಪದಗಳು ಬಂದಿವೇ ನೋಡ್ರೀ!! ಈ ಡ,ಡು,ಡೆ ಎಂಬ ಪದಗಳಿಂದ ಯಾವ ಹೆಸರು ತಾನೇ ಕನ್ನಡದಲ್ಲಿ ಆಗಲಿ ಯಾವ ಭಾಷೆಯಲ್ಲಿ ಆಗಲಿ ಬರೊದಕ್ಕೆ ಸಾಧ್ಯ?? (ಈಗಲೂ ಈ ಅಕ್ಷರದಿಂದ ನಿಮಗೆ ಏನಾದರೂ ಹೆಸರು ಗೊತ್ತಾದರೆ ಹೇಳಿ ನನ್ನ ಹೆಸರೇ ಬದಲಾಯಿಸಿಕೊಳ್ತಿನಿ.) ಹೆಸರಿ‌ನ ಮೊದಲ ಅಕ್ಷರ ಹೇಳಿದ ಜ್ಯೋತಿಷಿ ಬಳಿ ಯಾವುದೇ ಉತ್ತರ ಸಿಗದೆ ಕಂಗಾಲಾಗಿ ನಮ್ಮ ಅಜ್ಜಿ ತಾತ ಮತ್ತು ಅಪ್ಪ ಅಮ್ಮ ಅಪ್ಪ ಆಕಾಶ ತಲೆ ಮೇಲೆ ಬಿದ್ದಂಗಾಗಿ ಏನಿದು ಹುಟ್ಟಿರೊ ಮಗುವಿಗೆ ಈ ರೀತಿಯಲ್ಲಿ ಅಕ್ಷರಗಳು ಬಂದಿದಾವಲ್ಲಂತ ಯೋಚಿಸಿ ಕುಳಿತರಂತೆ.!

ಹೀಗೆ ಯೋಚಿಸಿದಾಗ ಅವರಿಗೆ ಒಂದು ಜ್ಞಾನೋದಯ ಅಗಿ ಹೇಗಿದ್ದರೂ ನಮ್ಮ ಮನೆಯ ದೇವರು ಸವದತ್ತಿ ಯಲ್ಲಮ್ಮ ಈಗ ಹುಟ್ಟಿದ ಗಂಡು ಮಗುವಿಗೆ ಆಕೆಯ ಮಗನಾದ ಪರಶುರಾಮ ಎಂಬ ಹೆಸರನ್ನೇ ಇಟ್ಟು ಇನ್ನೂ ಮಿಕ್ಕಿದ್ದ ಪಾಪ ಪುಣ್ಯ ಎಲ್ಲಾ ಯಲ್ಲಮ್ಮನ ಮೇಲೆ ಹಾಕಿ ಪರಶುರಾಮ ಎಂಬ ಹೆಸರಿನಲ್ಲಿ ನನಗೆ ನಾಮಕರಣ ಮಾಡಿದರು. ಇವತ್ತಿಗೂ ನಮ್ಮ ಹಳ್ಳಿಯಲ್ಲಿನ ನಮ್ಮ ಸಂಬಂಧಿ ಚಂದ್ರಣ್ಣ ಎಂಬುವವರು ನನಗೆ ಈ ಕತೆ ಹೇಳಿ ನನ್ನ ಹೀಗೆ ಡ,ಡು,ಡೆ ಎಂದೇ ಸಂಬೋಧಿಸಿ ಕರೆಯುತ್ತಾರೆ.

ಅವರಿಗೆ ನನ್ನ ಹೆಸರೇ ತಮಾಷೆಯ ವಸ್ತು. ನಾನು ಹುಟ್ಟಿದಾಗಲೇ ಬ್ರಾಹ್ಮಣರ ಬಳಿಯಿಂದ ಹೆಸರನ್ನು ಪಡೆಯದೆ ಹುಟ್ಟಿನಿಂದಲೇ ನಾನು ಬ್ರಾಹ್ಮಣತ್ವದ ವಿರೋಧಿಯಾಗಿದ್ದೆ, ಹೋರಾಡಿದ್ದೆ ಎಂದು ಈಗ ಒಮ್ಮೊಮ್ಮೆ ಹಲವು ಸಲ ಮನದಲ್ಲಿ ಯೋಚಿಸಿ ನಗು ಬರುತ್ತದೆ. ನನ್ನ ಅಮ್ಮ ಈ ಸಂಗತಿಯನ್ನು ಅದೆಷ್ಟೋ ಸಲ ಹೇಳಿ ನಗ್ತಾಳೆ. ನೀನು ನನಗೆ ಹುಟ್ಟಿದಾಗ ನಿನಗೆ ಒಂದು ಸರಿಯಾದ ಹೆಸರು ಬರಲಿಲ್ಲ ಗೊತ್ತ ನಿನಗೆ ಅಂತ ಕೇಳಿ.

ಹೇಗೋ ನನಗೂ ಒಂದು ಹೆಸರು ಬಂತು ಅಂದುಕೊಂಡಾಗ, ನಾನು ಚಿಕ್ಕವಯಸ್ಸಿನಲ್ಲಿದ್ದಾಗ ನಮ್ಮ ಸಂಬಂಧಿಕರು ನನ್ನ ಪರ್ಶಿ, ಪರ್ಸೀ ಅಂದು ನನ್ನ ಹೆಸರೇ ಹಾಳು ಮಾಡಿದ್ದರು. ಪರಶುರಾಮ ಎಂಬ ಸುಂದರ ಹೆಸರನ್ನು ಹೀಗೆ ಹಾಳು ಮಾಡಿದಾಗ ಯಾರಿಗೆ ತಾನೇ ಕೋಪ ಬರಲ್ಲ ಹೇಳಿ?? ಬೆಳೆದು ದೊಡ್ಡವನಾದರೂ ಇನ್ನೂ ಅದೆಷ್ಟು ಸಂಬಂಧಿಕರು ನನ್ನ ಪರ್ಸಿ ಪರ್ಸಿ ಅಂತಾನೆ ಕರೆತಾರೆ ಇದಂತು ನನಗೆ ಅಳುನೇ ತರ್ಸುತ್ತೆ.

ಇನ್ನೂ ನಾನು ಪ್ರಾಥಮಿಕ ಶಾಲೆಯಲ್ಲಿ ವಿದ್ಯೆ ತಲೆಗೆ ಹತ್ತದೆ ಇದ್ದಾಗ ನನಗೆ rr ಎಂಬ ಟೀಚರ್ ಒಬ್ಬರು ಪರಶುರಾಮ ಎಂಬ ನನ್ನ ಹೆಸರನ್ನ ಸಿದ್ದರಾಮ ಎಂದು ರೇಗಿಸುತ್ತಿದ್ದರು ಅದು ತರಗತಿಯ ನನ್ನ ಎಲ್ಲಾ ಸ್ನೇಹಿತರ ಮುಂದೆ. ನನಗೆ ಎಷ್ಟು ಕೋಪ ಮುಜುಗರ ಬರಬೇಡ?? ಆಗ ನನಗೆ ಕೇವಲ ಏಳು ಅಥವಾ ಎಂಟು ವರ್ಷ. ಇನ್ನೂ ನಾನು ಐದನೇ ತರಗತಿಯ ಓದುವಾಗ ನಮಗೆ ಇಂಗ್ಲೀಷ್ ಭಾಷೆ ಪರಿಚಯಿಸಿದರು, ನೇತ್ರಾವತಿ ಟೀಚರ್ ಸಹ ನನ್ನ ಹೆಸರನ್ನು ಇಂಗ್ಲಿಷ್ ಓದಲು ಬಾರದೆ ಇದ್ದದ್ದಕ್ಕೆ ಮತ್ತದೇ ಸಿದ್ದರಾಮ ಎಂದು ಒತ್ತಿ ಒತ್ತಿ ಕರೆಯುತ್ತಿದ್ದರು. ‌

ಆಗಲಂತು ನನ್ನ ಮನಸ್ಸು ನನ್ನ ಈ ಹೆಸರಿನ ಬಗೆಗೆ ತೀವ್ರ ಜಿಗುಪ್ಸೆ ತರಿಸಿತ್ತು.
ಇನ್ನೂ ಏಳನೇ ತರಗತಿಯಲ್ಲಿ ಪರಶುರಾಮ್ ಎಂಬ ನನ್ನೊಂದಿಗೆ ಪುರುಷೋತ್ತಮ ಎಂಬ ಎರಡು ಸ್ನೇಹಿತರು ಬೇರೆ ಒಂದೇ ತರಗತಿಯಲ್ಲಿ ಇದ್ದೆವು. ಆಗಲಂತು ತರಗತಿಗೆ ಬಂದ ಟೀಚರ್ ಗಳು ಅದೆಷ್ಟೋ ಬಾರಿ ಪುರುಷೋತ್ತಮನ ಪರಶುರಾಮ ಎಂದು ಪರಶುರಾಮನ ಪುರುಷೋತ್ತಮ ಎಂದು ಕರೆದು ಗೊಂದಲಕ್ಕೆ ಸಿಕ್ಕಿಸಿದರೊ ಗೊತ್ತಿಲ್ಲ. ಇದು ಒಂದು ವರ್ಷಗಳ ಕಾಲ ಹೀಗೆ ನಡೆಯಿತು.

ಇನ್ನೂ ಹೈಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಈ ಹೆಸರು ಮತ್ತದೆ ಯಥಾವತ್ ಜಿಗುಪ್ಸೆ ತರಿಸಿ ನನ್ನ ಹೆಸರೇ ನಾನು ಕಳಚುವಂತೆ ಯೋಚಿಸಲು ತಲೆನೋವು ತಂದಿತ್ತು. ಕಾರಣ ಸ್ನೇಹಿತರು ನನ್ನ ರೇಗಿಸಲು ನನ್ನ ಹೆಸರನ್ನೇ ಅಸ್ತ್ರವನ್ನಾಗಿ ಬಳಸಿ ಪರ್ಸು ಪರ್ಸು(purse) ಅನ್ನೊರು. ಆಗಲಂತು ನನಗೆ ಕೆಟ್ಟ ಕೋಪ ಬರೊದು ನಿಜವಾಗಿಯೂ ನನ್ನ ಹೆಸರಿಗೆ ತಕ್ಕಂತೆ ಪರಶುರಾಮನಾಗಿ ಹೊಡೆಯಲ ಎಂದು ಆದರೆ ಏನು ಮಾಡೊದು ಎಲ್ಲಾ ಸ್ನೇಹಿತರೆ ಅಂತ ನನಗೆ ನಾನೇ ಸಮಾದಾನವಾಗಿ ತಗೊಂಡು ನಾನು ಅವರೊಂದಿಗೆ ನಗ್ತ ಸುಮ್ಮನೆ ಆಗ್ತಿದ್ದೆ. ಹಿರಿಯರು ಮತ್ತು ಅನಕ್ಷರಸ್ಥರ ಬಾಯಲ್ಲಿ ನನ್ನ ಹೆಸರು ಹೀಗೆ ಹಾಳದದ್ದು ಉಂಟು ಆದರೆ ಅಕ್ಷರಸ್ಥರ ಬಾಯಲ್ಲಿ ಹೆಸರು ಹಾಳಾದಾಗ ಆಗುವ ನೋವು ಹೇಳಲಾಗದಷ್ಟು ಇತ್ತು.

ಇನ್ನೂ ನಾನು ಡಿ,ಎಡ್ ಓದುವಾಗಲಂತೂ ವಿಜ್ಞಾನದ ಸರ್ ಗುರುಮೂರ್ತಿಯವರಂತು ಪ್ರತಿ ಭಾರಿ ನನ್ನ ಪರಶಿವನಾಗಿ ಮಾಡಿದ್ದರು. ಪರಶಿವ ಎಂದರೆ ಶಿವನಾಗಿ ಅಲ್ಲ. ಪರಶುರಾಮನ ಹೆಸರನ್ನು ಅವರು ಗೊಂದಲದಲ್ಲಿ ಪರಶಿವ ಎಂದೇ ಕರೆಯುತ್ತಿದ್ದರು ಅದಕ್ಕೆ ಕಾರಣ ಎರಡು ವರ್ಷಗಳ ಹಿಂದಿನ ಡಿ,ಎಡ್ ಬ್ಯಾಚಿನಲ್ಲಿ ಪರಶಿವ ಎಂಬ ಹೆಸರಿನ ವಿದ್ಯಾರ್ಥಿ ಹುಡುಗನೊಬ್ಬ ಇದ್ದನಂತೆ ಅದರಿಂದಾಗಿ ನನ್ನ ಹೆಸರು ಹೀಗೆ ಬದಲಾಗಿತ್ತು.

ಡಿ.ಎಡ್ ಮಾಡಿದ ಎರಡು ವರ್ಷಗಳ ಕಾಲ ನನ್ನ ಅವರು ಕರೆದದ್ದು ಪರಶಿವನೆಂದೆ. ನನಗೂ ನನ್ನ ಹೆಸರು ಸರ್ ಗೆ ಹೇಳಿ ಹೇಳಿ ಸಾಕಾಗಿ ಸರಿ ಇನ್ನೂ ಮುಂದೆ ಸರ್ ಕೂಗುವ ಈ ಹೆಸರಿಗೆ ಪ್ರತಿಕ್ರಿಯಿಸಲು ನಾನೇ ಬದಲಾಗಿ ಅವರು ಪರಶಿವ ಎಂದಾಗಲೆಲ್ಲ ಓಗುಟ್ಟುತ್ತಿದ್ದೆ.

ಆದರೂ ಅವರು ಕೊನೆಯ ವರೆಗೆ ನನ್ನ ಹೆಸರು ಜ್ಞಾಪಕ ಶಕ್ತಿಯಲ್ಲಿ ಉಳಿಸಿಕೊಂಡಿದ್ದು ಪರಶಿವನಾಗಿಯೇ ಹೊರತು ಪರಶುರಾಮನಾಗಿ ಅಲ್ಲ!! ಇವತ್ತಿಗೂ ಆಗಾಗ ಕಾಲೇಜ್ ಕಡೆ ಹೋದಾಗ ಎದುರಾದರೆ ಏನಯ್ಯ ಪರಶಿವ ಅಂತಾರೆ. ಗುರುಗಳ ಆ ಮಾತಿಗೆ ಉತ್ತರಿಸಲೊ ಕೋಪಗೊಳ್ಳಲೊ ಅಥವಾ ಅವರ ಬಾಯಲ್ಲಿ ನನ್ನ ಬದಲಾದ ಹೆಸರಿಗೆ ಮುಜುಗರ ಪಡಲೊ ತಿಳಿಯದೆ ಕಂಗಲಾಗ್ತಿನಿ..

ಅಂದ ಹಾಗೆ ನಿಮಗೆ ನನ್ನ ಹೆಸರು ಸರಿಯಾಗಿ ಏನಂತ ಗೊತ್ತಾಯ್ತ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ದಿನದ ಸುದ್ದಿ

ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.

ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ  ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ

Published

on

ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.

Continue Reading

Trending